AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ವೈದ್ಯರ ನಿರ್ಲಕ್ಷ್ಯ: ಒಂದುವರೆ ವರ್ಷದಿಂದಷ್ಟೇ ಮದ್ವೆಯಾಗಿದ್ದ ಗೋಲ್ಡ್ ಮೆಡಲಿಸ್ಟ್ ದುರಂತ ಸಾವು

ಮಹಿಳೆ ಹೆಸರು ಅಶ್ವಿನಿ. ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನವರಾಗಿದ್ದು, MCA ಸ್ನಾತಕೋತ್ತರ ಪದವಿಯಲ್ಲಿ ಗೋಲ್ಡ್​ ಮೆಡಲಿಸ್ಟ್ ಆಗಿದ್ದ ಅಶ್ವಿನಿ ಒಂದುವರೆ ವರ್ಷದ ಹಿಂದೆ ಅಷ್ಟೇ ಮದುವೆಯಾಗಿದ್ದಾರೆ. ಆದ್ರೆ, ದುರದೃಷ್ಟವಶಾತ್​ ಮದುವೆಯಾದ ಒಂದುವರೆ ವರ್ಷದಲ್ಲೇ ದುರಂತ ಅಂತ್ಯಕಂಡಿದ್ದಾಳೆ. ಮಗು ಪಡೆಯುವ ನಿರೀಕ್ಷೆಯಲ್ಲಿದ್ದ ಅಶ್ವಿನಿ ಸಾವನ್ನಪ್ಪಿದ್ದಾಳೆ. ಹಾಗಾದ್ರೆ, ಆಗಿದ್ದೇನು?

Basavaraj Yaraganavi
| Edited By: |

Updated on:Jan 28, 2025 | 6:16 PM

Share
ಕರ್ನಾಟಕದಲ್ಲಿ ಗರ್ಭಿಣಿಯರ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಸಿಜರಿಯನ್ ಬಳಿಕ ಕೆಲ ದಿನಗಳಲ್ಲೇ ಗರ್ಭಿಣಿಯರು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ. ಆದ್ರೆ, ಶಿವಮೊಗ್ಗ ಜಿಲ್ಲೆಯಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡುವ ಮೊದಲೇ ಮೃತಪಟ್ಟಿದ್ದಾರೆ. 

1 / 8
 ಒಂದುವರೆ ವರ್ಷದ ಒಂದೂವರೆ ತಿಂಗಳ ಗರ್ಭಿಣಿಯಾಗಿದ್ದ ಅಶ್ವಿನಿ ಸಾಗರದ ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ಸಿಗದೆ ಮೃತಪಟ್ಟಿದ್ದಾರೆ. ಇದರಿಂದ ಸಾಗರ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ.

2 / 8
ಅಶ್ವಿನಿಯವರು ಮದುವೆಯಾಗಿ ಕೇವಲ ಒಂದೂವರೆ ವರ್ಷ ಆಗಿತ್ತು. ಅಶ್ವಿನಿ (28) ತೀರ್ಥಹಳ್ಳಿ ತಾಲೂಕು. ಗಂಡನ ಮನೆ ಹೊಸನಗರ ತಾಲೂಕಿನ ದುಬಾರತಟ್ಟಿ ಗ್ರಾಮ. ಗಂಡನ ಹೆಸರು ಪ್ರಕಾಶ್. ಪತಿ ಕೃಷಿಕನಾಗಿದ್ದಾನೆ. ಅಶ್ವಿನಿ ಒಂದೂವರೆ ತಿಂಗಳ ಗರ್ಭಿಣಿಯಾಗಿದ್ದಳು. ಆದ್ರೆ, ಆರೋಗ್ಯದಲ್ಲಿ ಏರುಪೇರು ಹಿನ್ನೆಲೆಯಲ್ಲಿ ನಿನ್ನೆ (ಜನವರಿ 27) ಸಾಗರದ ತಾಲೂಕು ಆಸ್ಪತ್ರೆಗೆ ಹೋಗಿದ್ದಳು.

3 / 8
ಈ ವೇಳೆ ಅಸ್ವಸ್ಥಗೊಂಡ ಅಶ್ವಿನಿಗೆ ವೈದ್ಯರು ಗರ್ಭಪಾತ ಮಾಡಿಸಿದ್ದಾರೆ. ಬಳಿಕವೂ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ಈ ಹಿನ್ನಲೆಯಲ್ಲಿ ಗಂಭೀರ ಸ್ಥಿತಯಲ್ಲಿದ್ದ ಅಶ್ವಿನಿಯನ್ನು ಶಿವಮೊಗ್ಗ ಆಶ್ಪತ್ರೆಗೆ ಕರೆದುಕೊಂಡು ಹೋಗಲು ಸಾಗರ ಸರ್ಕಾರಿ ವೈದ್ಯರ ಸೂಚಿಸಿದ್ದಾರೆ. ಅದರಂತೆ ಕುಟುಂಬಸ್ಥರು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಕೆಲವೇ ಕ್ಷಣದಲ್ಲಿ ಅಶ್ವಿನಿ ಕೊನೆಯುಸಿರೆಳೆದಿದ್ದಾಳೆ.

4 / 8
ಸಾಗರದಿಂದ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲು ಸಮಯ ವ್ಯರ್ಥವಾಗಿದೆ. ಆರೋಗ್ಯವಾಗಿದ್ದ 28 ವಯಸ್ಸಿನ ಒಂದೂವರೆ ತಿಂಗಳ ಗರ್ಭೀಣಿಯು ಸಾವಿಗೆ ಸಾಗರ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಮೃತಳ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

5 / 8
ಮಗು ಸರಿಯಾಗಿ ಬೆಳೆದಿರಲಿಲ್ಲ. ಈ ಹಿನ್ನಲೆಯಲ್ಲಿ ಆಶ್ವಿನಿಗೆ ವೈದ್ಯರು ಗರ್ಭಪಾತ ಮಾಡಿದ್ದಾರಂತೆ. ಗರ್ಭಪಾತ ಮಾಡಿದ ಬಳಿಕ ನಿರಂತರವಾಗಿ ಅಶ್ವಿನಿಗೆ ರಕ್ತಸ್ರಾವ ಆಗಿದೆ. ಹಂತ ಹಂತವಾಗಿ ಅಶ್ವಿನಿ ಆರೋಗ್ಯವು ಹದಿಗೆಡುತ್ತಾ ಹೋಗುತ್ತಿತ್ತು. ಇದನ್ನು ಗಮನಿಸಿ ವೈದ್ಯರು ತುರ್ತು ಮತ್ತು ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ಶಿವಮೊಗ್ಗಕ್ಕೆ ಹೋಗಲು ಸೂಚಿಸಿದ್ದರು. ಸಾಗರ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಕೊಟ್ಟಿದ್ದರೆ ಅಶ್ವಿನಿ ಬದುಕಬಹುದಿತ್ತು. ಆದ್ರೆ ವೈದ್ಯರು ಯಾವುದೇ ರೀಸ್ಕ್ ತೆಗೆದುಕೊಳ್ಳದೇ ಅಶ್ವಿನಿಯನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ದಾರಿಯೂದ್ದಕ್ಕೂ ವಿಲ ವಿಲ ಒದ್ದಾಡಿದ್ದ ಅಶ್ವಿನಿ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲು ಮಾಡುತ್ತಿದ್ದಂತೆ ಪ್ರಾಣ ಹೋಗಿದೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

6 / 8
ಅಶ್ವಿನಿ ಅವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂಸಿಎ ವಿದ್ಯಾಭ್ಯಾಸ ಮುಗಿಸಿ ಚಿನ್ನದ ಪದಕ ಪಡೆದಿದ್ದ ಪ್ರತಿಭಾವಂತೆಯಾಗಿದ್ದು,  ಹೊಸನಗರದ ಅಮೃತಾನಂದ ಮಯಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಇನ್ನು ನೂರಾರು ಕನಸುಗಳೊಂದಿಗೆ ಜೊತೆಗೆ ಒಂದೂವರೆ ವರ್ಷದ ಹಿಂದಷ್ಟೇ ಹೊಸನಗರದ ಅರಳಿ ಪ್ರಕಾಶ್ ಎಂಬುವರ ಜೊತೆಗೆ ಮದುವೆಯಾಗಿದ್ದ ಅಶ್ವಿನಿ ಇದೀಗ ದುರಂತ ಅಂತ್ಯ ಕಂಡಿದ್ದಾಳೆ.

7 / 8
ಒಂದೂವರೆ ತಿಂಗಳ ಗರ್ಭೀಣಿಯು ಹಠಾತ್ ಸಾವು ಸದ್ಯ ನೂರೆಂಟು ಅನುಮಾನಗಳನ್ನು ಹುಟ್ಟು ಹಾಕಿದೆ. ಮದುವೆಯಾಗಿ ಒಂದೂವರೆ ವರ್ಷ. ಕೇವಲ 28 ವಯಸ್ಸಿಗೆ ತನ್ನ ಜೀವ ಕಳೆದುಕೊಂಡಿದ್ದಾಳೆ. ಸಾಗರ ಸರಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ಕುರಿತು ಸೂಕ್ತ ತನಿಖೆಯಾಗಬೇಕಿದೆ. ಆಸ್ಪತ್ರೆಗೆ ಬರುವ ಗರ್ಭಿಣಿ ಮತ್ತು ಬಾಣಂತಿಯರಿಗೆ ಸರಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದ್ಯಾ ಎನ್ನುವುದು ಅಶ್ವಿನಿ ಪ್ರಕರಣದಿಂದ ಗೊತ್ತಾಗಿದೆ.

8 / 8

Published On - 5:51 pm, Tue, 28 January 25

ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ

ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು

ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ

ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ

New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು

ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ

ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ

ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​

ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ

ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು