ಹೊಸ ವರ್ಷಕ್ಕೆ ಒಟಿಟಿಗೆ ಬಂದಿವೆ ಹೊಸ ಸಿನಿಮಾಗಳು: ಪಟ್ಟಿ ಇಲ್ಲಿದೆ
OTT Release this week: ಡಿಸೆಂಬರ್ ತಿಂಗಳು ಚಿತ್ರಮಂದಿರಗಳಲ್ಲಿ ಹಬ್ಬವೇ ನಡೆದಿದೆ. ಹಲವು ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗಿವೆ. ಹೊಸ ವರ್ಷಕ್ಕೂ ಅಬ್ಬರ ಮುಂದುವರೆದಿದೆ. ಅಂತೆಯೇ ಒಟಿಟಿಯಲ್ಲಿಯೂ ಸಹ ಹೊಸ ವರ್ಷಕ್ಕೆ ಕೆಲ ಹೊಸ ಸಿನಿಮಾಗಳು ಒಟಿಟಿಗೆಯಲ್ಲಿ ಬಿಡುಗಡೆ ಕಂಡಿವೆ. ಚಿತ್ರಮಂದಿರದಲ್ಲಿ ಸೂಪರ್ ಹಿಟ್ ಆದ, ವಿಮರ್ಶಕರಿಂದ ಮೆಚ್ಚುಗೆ ಗಳಿಸಿದ ಸಿನಿಮಾಗಳು ಈ ವಾರ ವೀಕ್ಷಣೆಗೆ ಲಭ್ಯವಿವೆ, ಇಲ್ಲಿದೆ ಪಟ್ಟಿ...
Updated on: Jan 03, 2026 | 4:03 PM

ಮಲಯಾಳಂನ ‘ಎಕೊ’ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆದಾಗಿನಿಂದಲೂ ಸಖತ್ ಸದ್ದು ಮಾಡುತ್ತಿದೆ. ಈ ಹಿಂದೆ ಸೂಪರ್ ಹಿಟ್ ‘ಕಿಷ್ಕಿಂದಾ ಕಾಂಡಂ’ ಸಿನಿಮಾ ಮಾಡಿದ್ದ ತಂಡವೇ ‘ಎಕೊ’ ಹಿಂದೆಯೂ ಇದೆ. ಈ ಸಿನಿಮಾವನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ.

ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಕನ್ನಡ ಸಿನಿಮಾ ‘ಫುಲ್ ಮೀಲ್ಸ್’ ಇದೀಗ ಒಟಿಟಿಗೆ ಬಂದಿದೆ. ಖುಷಿ ರವಿ, ತೇಜಸ್ವಿನಿ ಶರ್ಮಾ ಮತ್ತು ಲಿಖಿತ್ ಶೆಟ್ಟಿ ನಟಿಸಿರುವ ಈ ಸಿನಿಮಾವನ್ನು ಲಿಖಿತ್ ಶೆಟ್ಟಿ ಅವರೇ ನಿರ್ದೇಶನ ಸಹ ಮಾಡಿದ್ದಾರೆ. ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ವೀಕ್ಷಿಸಬಹುದು.

ದೇಶದಾದ್ಯಂತ ಸುದ್ದಿ ಆಗಿದ್ದ ಶಾ ಬಾನೊ ಪ್ರಕರಣವನ್ನು ಆಧರಿಸಿದ ಕೋರ್ಟ್ ರೂಂ ಡ್ರಾಮಾ ‘ಹಖ್’ ಇದೀಗ ನೆಟ್ಫ್ಲಿಕ್ಸ್ಗೆ ಬಂದಿದೆ. ಸಿನಿಮಾನಲ್ಲಿ ಯಾಮಿನಿ ಗುಪ್ತಾ ಮತ್ತು ಇಮ್ರಾನ್ ಹಶ್ಮಿ ನಟಿಸಿದ್ದಾರೆ. ಸಿನಿಮಾ ನೋಡಿದವರು ಬಹುವಾಗಿ ಮೆಚ್ಚಿಕೊಂಡು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನೆಟ್ಫ್ಲಿಕ್ಸ್ ‘ಹಖ್’ ಸ್ಟ್ರೀಂ ಆಗುತ್ತಿದೆ.

ಎಲ್ಬಿಡಬ್ಲು (ಲವ್ ಬಿಯಾಂಡ್ ವಿಕೆಟ್) ತಮಿಳಿನ ವೆಬ್ ಸರಣಿ ಇದೇ ವಾರ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಕ್ರಿಕೆಟ್ ಆಟಗಾರ್ತಿಯರು ಮತ್ತು ಕೋಚ್ ನಡುವಿನ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿದೆ. ವೆಬ್ ಸರಣಿಯನ್ನು ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದಾಗಿದೆ.

ತೆಲುಗು ಸಿನಿಮಾ ‘ಮೋಗ್ಲಿ’ ಒಂದು ಅಡ್ವೇಂಚರಸ್ ಥ್ರಿಲ್ಲರ್ ಕತೆಯಾಗಿದೆ. ಸಿನಿಮಾನಲ್ಲಿ ಹಾಸ್ಯ ಮತ್ತು ರೊಮ್ಯಾನ್ಸ್ ಸಹ ಇದ್ದು, ಸಿನಿಮಾ ಇದೀಗ ಇಟಿವಿ ವಿನ್ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.

ವಿಶ್ವದ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದಾಗಿರುವ ‘ಸ್ಟ್ರೇಂಜರ್ ಥಿಂಗ್ಸ್’ನ ಕಟ್ಟ ಕಡೆಯ ಎಪಿಸೋಡ್ ಜನವರಿ 1ಕ್ಕೆ ಬಿಡುಗಡೆ ಆಗಲಿದೆ. ಸ್ಟ್ರೇಂಜರ್ ಥಿಂಗ್ಸ್ನ ಎಲ್ಲ ಸೀಸನ್ ಅನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ.




