ಈ ವಾರ ಒಟಿಟಿಗೆ ಕೆಲ ಒಳ್ಳೆಯ ಸಿನಿಮಾಗಳು, ಕನ್ನಡದ ಚಿತ್ರಗಳೂ ಇವೆ

Updated on: Aug 10, 2025 | 4:24 PM

OTT Release this week: ‘ಜೂನಿಯರ್’, ‘ಎಕ್ಕ’ ಬಳಿಕ ಬಂದ ‘ಸು ಫ್ರಂ ಸೋ’ ಸಿನಿಮಾ ಅಂತೂ ದಾಖಲೆಗಳನ್ನೇ ಬರೆಯುತ್ತಿದೆ. ಇದರ ನಡುವೆ ಕೆಲ ಪರಭಾಷೆ ಸಿನಿಮಾಗಳು ಸಹ ಚಿತ್ರರಸಿಕರನ್ನು ಸೆಳೆದಿವೆ. ಮುಂದಿನ ವಾರವಂತೂ ದೊಡ್ಡ ಸಿನಿಮಾಗಳು ಬಿಡುಗಡೆ ಆಗಲಿಕ್ಕಿವೆ. ಇವುಗಳ ನಡುವೆ ಒಟಿಟಿಗೆ ಈ ವಾರ ಕೆಲ ಉತ್ತಮ ಸಿನಿಮಾಗಳು ಬಂದಿವೆ. ಈ ವಾರ ಬಂದಿರುವ ಕನ್ನಡ ಸಿನಿಮಾಗಳನ್ನಂತೂ ಮಿಸ್ ಮಾಡುವಂತೆಯೇ ಇಲ್ಲ.

1 / 6
2024 ರಲ್ಲಿ ಬಿಡುಗಡೆ ಆಗಿ ಭಾರಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದ ಕನ್ನಡ ಸಿನಿಮಾ ‘ಫೋಟೊ’. ಕೊವಿಡ್ ಸಮಯದ ಸಂಕಷ್ಟಗಳನ್ನು ತೋರಿಸಿದ್ದ ಸಿನಿಮಾ ಇದಾಗಿತ್ತು. ಸಿನಿಮಾಕ್ಕೆ ಕೆಲವು ಸಿನಿಮಾ ಸೆಲೆಬ್ರಿಟಿಗಳು ಬೆಂಬಲ ನೀಡಿದ್ದರು. ಇದೀಗ ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.

2 / 6
ಇತ್ತೀಚೆಗಷ್ಟೆ ಬಿಡುಗಡೆ ಆದ ‘ಹೆಬ್ಬುಲಿ ಕಟ್’ ತಮ್ಮ ಅದ್ಭುತವಾದ ಕತೆಯಿಂದ, ಅಡಗಿಸಿಕೊಂಡಿರುವ ಸಾರದಿಂದಾಗಿ ಗಮನ ಸೆಳೆದ ಸಿನಿಮಾ. ದಲಿತರಿಗೆ ಕ್ಷೌರ ಮಾಡುವುದೇ ಅಪರಾಧವಾಗಿರುವ ಊರಿನಲ್ಲಿ ದಲಿತ ಬಾಲಕನೊಬ್ಬ ಸುದೀಪ್ ಅವರ ‘ಹೆಬ್ಬುಲಿ’ ಸಿನಿಮಾ ರೀತಿ ಕಟಿಂಗ್ ಮಾಡಿಸಿಕೊಳ್ಳಬೇಕು ಎಂದು ಬಯಸುವ ಕತೆ ಸಿನಿಮಾ ಒಳಗೊಂಡಿದೆ. ಸಿನಿಮಾ ಸನ್ ನೆಕ್ಸ್ಟ್​​ನಲ್ಲಿ ಬಿಡುಗಡೆ ಆಗಿದೆ.

3 / 6
ಮನುಷ್ಯ ಮತ್ತು ಪ್ರಕೃತಿಯ ಸಂಬಂಧದ ಕತೆ ಹೊಂದಿರುವ ‘ತಿಮ್ಮನ ಮೊಟ್ಟೆಗಳು’ ಸಿನಿಮಾ ಇದೀಗ ಪ್ರೈಂ ವಿಡಿಯೋನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ರಕ್ಷಿತ್ ತೀರ್ಥಹಳ್ಳಿ ಈ ಸಿನಿಮಾದ ನಿರ್ದೇಶಕ.

4 / 6
ನಟ ಸತ್ಯದೇವ್ ನಟಿಸಿರುವ ‘ಅರೇಬಿಯಾ ಕಡಲೈ’ ಸಿನಿಮಾ ಇತ್ತೀಚೆಗಷ್ಟೆ ಅಮೆಜಾನ್ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಸಮುದ್ರದಲ್ಲಿ ನಡೆಯುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾ ಚೆನ್ನಾಗಿದೆ ಎಂಬ ವಿಮರ್ಶೆ ವ್ಯಕ್ತವಾಗಿದೆ.

5 / 6
ತಮಿಳಿನ ಜನಪ್ರಿಯ ನಟ, ಹಾಸ್ಯನಟ ಸೂರಿ ನಟಿಸಿರುವ ‘ಮಾಮನ್’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಕೆಲ ವಾರಗಳ ಹಿಂದೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಹಿಟ್ ಆಗಿದ್ದ ಸಿನಿಮಾ ಇದು. ಸಿನಿಮಾ ಜೀ5ನಲ್ಲಿ ವೀಕ್ಷಣೆಗೆ ಲಭ್ಯವಿದೆ.

6 / 6
ಟೊವಿನೊ ಥಾಮಸ್, ಸೋಬಿನ್ ಸೇರಿದಂತೆ ಇನ್ನೂ ಕೆಲವು ಪ್ರಮುಖ ನಟರು ನಟಿಸಿರುವ ‘ನಡಿಕರ್’ ಮಲಯಾಳಂ ಸಿನಿಮಾ ಇದೀಗ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಸೈನಾ ಪ್ಲೇ ಒಟಿಟಿಯಲ್ಲಿ ಈ ಸಿನಿಮಾ ನೋಡಬಹುದು.