ಈ ವಾರ ಒಟಿಟಿಗೆ ಬಂದಿರುವ ಸಿನಿಮಾಗಳಿವು, ಕನ್ನಡ ಸಿನಿಮಾಗಳೂ ಇವೆ

Updated on: Apr 19, 2025 | 12:36 PM

OTT Release this week: ಚಿತ್ರಮಂದಿರದಲ್ಲಿ ಕೆಲ ಒಳ್ಳೆಯ ಸಿನಿಮಾಗಳು ಈ ವಾರ ಬಿಡುಗಡೆ ಆಗಿವೆ. ಅಕ್ಷಯ್ ಕುಮಾರ್ ನಟನೆಯ ‘ಕೇಸರಿ 2’ ತೆಲುಗಿನಲ್ಲಿ ತಮನ್ನಾ, ವಸಿಷ್ಠ ಸಿಂಹ ನಟನೆಯ ‘ಒದೆಲ 2’, ‘ಅರ್ಜುನ್ ಸನ್ ಆಫ್ ವೈಜಯಂತಿ’ ಇನ್ನೂ ಕೆಲ ಸಿನಿಮಾಗಳು ಬಿಡುಗಡೆ ಆಗಿವೆ. ಇವುಗಳ ನಡುವೆ ಒಟಿಟಿಗೆ ಸಹ ಕೆಲ ಒಳ್ಳೆಯ ಸಿನಿಮಾಗಳು ಲಗ್ಗೆ ಇಟ್ಟಿವೆ. ಇಲ್ಲಿವೆ ಈ ವಾರ ಒಟಿಟಿಗೆ ಬಂದ ಸಿನಿಮಾಗಳ ಪಟ್ಟಿ...

1 / 5
ಮಲಯಾಳಂ ಆಕ್ಷನ್ ಡ್ರಾಮಾ ಸಿನಿಮಾ ‘ಡೇವಿಡ್’ ಈ ವಾರ ಜೀ5 ನಲ್ಲಿ ತೆರೆಗೆ ಬಂದಿದೆ. ಬಾಕ್ಸಿಂಗ್ ಕುರಿತ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾಕ್ಕೆ ವಿಮರ್ಶಕರ ಮೆಚ್ಚುಗೆ ವ್ಯಕ್ತವಾಗಿತ್ತು.

2 / 5
ಇಂದ್ರಜಿತ್ ಲಂಕೇಶ್ ನಿರ್ದೇಶಿಸಿ, ಅವರ ಪುತ್ರಿ ಸಮರ್ಜಿತ್ ಲಂಕೇಶ್ ಮತ್ತು ಸಾನ್ಯಾ ಐಯ್ಯರ್ ನಟಿಸಿರುವ ‘ಗೌರಿ’ ಮತ್ತು ಬಹಳ ವರ್ಷಗಳ ಹಿಂದೆ ಶುರುವಾಗಿದ್ದ ‘ಗೋಪಿಲೋಲ’ ಸಿನಿಮಾಗಳು ಸಹ ಇದೇ ವಾರದಲ್ಲಿ ಒಟಿಟಿಗೆ ಕಾಲಿಟ್ಟಿವೆ. ಈ ಸಿನಿಮಾಗಳು ಸಹ ಪ್ರೈಂನಲ್ಲಿ ಲಭ್ಯ ಇವೆ.

3 / 5
ಮನೋಜ್ ಪನ್ವಾರ್ ಸೇರಿದಂತೆ ಇನ್ನೂ ಕೆಲವು ಪ್ರತಿಭಾವಂತ ನಟ-ನಟಿಯರು ನಟಿಸಿರುವ ‘ಕೌಫ್’ ಹಾರರ್ ಥ್ರಿಲ್ಲರ್ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಈ ವಾರ ಬಿಡುಗಡೆ ಆಗಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಗಮನ ಸೆಳೆದಿದೆ.

4 / 5
ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ‘ಮಿಥ್ಯ’ ಸಿನಿಮಾ ಅಮೆಜಾನ್ ಪ್ರೈಂಗೆ ಈ ವಾರ ಕಾಲಿಟ್ಟಿದೆ. ಒಬ್ಬ ಬಾಲಕ ಹಾಗೂ ಎರಡು ಕುಟುಂಬದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಅನ್ನು ರಕ್ಷಿತ್ ಶೆಟ್ಟಿಯ ಗೆಳೆಯ ಸುಮನ್ ನಿರ್ದೇಶನ ಮಾಡಿದ್ದಾರೆ.

5 / 5
ತಮಿಳಿನ ಅಡಲ್ಟ್ ಕಾಮಿಡಿ ಸಿನಿಮಾ ‘ಪೆರುಸು’ ಈ ವಾರ ಒಟಿಟಿಗೆ ಬಂದಿದೆ. ವಯಸ್ಸಾದ ವ್ಯಕ್ತಿ ಮೃತನಾದಾಗ ಆತನ ಬಗೆಗಿನ ಗುಟ್ಟೊಂದು ಕುಟುಂಬಕ್ಕೆ ಗೊತ್ತಾಗುತ್ತದೆ. ಅದನ್ನು ಮುಚ್ಚಿಟ್ಟು ಅಂತ್ಯಕ್ರಿಯೆ ಮಾಡಲು ಕುಟುಂಬ ಪಡುವೆ ಪಾಟಲುಗಳ ಕತೆಯೇ ‘ಪೆರುಸು’ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಲಭ್ಯವಿದೆ.

Published On - 12:32 pm, Sat, 19 April 25