
ಕೊಪ್ಪಳ ಜಿಲ್ಲೆಯ ಗಂಗಾವತಿ ಬಳಿ ಇರುವ ಪ್ರಸಿದ್ಧ ಅಂಜನಾದ್ರಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಅಂತ್ಯವಾಗಿದೆ.

ಕೊಪ್ಪಳ ಎಸಿ ಕ್ಯಾಪ್ಟನ್ ಮಹೇಶ್ ನೇತೃತ್ವದಲ್ಲಿ ಇಂದು (ಮೇ 21) ನಡೆದ ಹುಂಡಿ ಎಣಿಕೆ ನಡೆದಿದ್ದು, ಎರಡು ತಿಂಗಳಲ್ಲಿ ಹುಂಡಿಯಲ್ಲಿ ಬರೋಬ್ಬರಿ 30,21,252 ರೂಪಾಯಿ ಸಂಗ್ರಹವಾಗಿದೆ.

ವಿಶೇಷ ಅಂದರೆ ಹುಂಡಿ ಎಣಿಕೆ ಕಾರ್ಯ ವೇಳೆ ಯುಎಸ್ಎ, ಪಾಕಿಸ್ತಾನ ಸೇರಿದಂತೆ ಐದು ವಿದೇಶಿ ನಾಣ್ಯಗಳು ಪತ್ತೆಯಾಗಿವೆ.

ಪಾಕಿಸ್ತಾನದ 5 ರೂಪಾಯಿ ಮುಖಬೆಲೆಯ ಒಂದು ನಾಣ್ಯ ಹುಂಡಿ ಎಣಿಕೆ ವೇಳೆ ಸಿಕ್ಕಿದೆ.

ಪಾಕಿಸ್ತಾನ ನಾಣ್ಯ ಮಾತ್ರವಲ್ಲದೇ ಇದರ ಜೊತೆಗೆ ಯುಎಸ್ಎ ಸೇರಿದಂತೆ ಒಟ್ಟು ಐದು ವಿದೇಶಿ ನಾಣ್ಯಗಳು ಪತ್ತೆಯಾಗಿವೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಆಂಜನೇಯ ದರ್ಶನಕ್ಕೆ ನಿತ್ಯ ಸಾವಿರಾರು ಭಕ್ತರು, ಪ್ರವಾಸಿಗರು ಆಗಮಿಸುತ್ತಾರೆ. ಬೇರೆ ಬೇರೆ ರಾಜ್ಯ, ದೇಶಗಳಿಂದಲೂ ಭಕ್ತ ಇಲ್ಲಿಗೆ ಬರುತ್ತಾರೆ.