ನಟಿ ಪವಿತ್ರಾ ಗೌಡ ಅವರು ಸಖತ್ ಸುದ್ದಿಯಲ್ಲಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅವರು ಎ1 ಆರೋಪಿ ಎನಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಅವರನ್ನು ಅರೆಸ್ಟ್ ಮಾಡಿ ವಿಚಾರಣೆ ಮಾಡಲಾಗುತ್ತಿದೆ. ದರ್ಶನ್ ಕೂಡ ಈ ಪ್ರಕರಣದಲ್ಲಿ ಸಿಲುಕಿದ್ದಾರೆ.
ಇಂದು ಗ್ಲಾಮರ್ ಗೊಂಬೆ ಆಗಿರೋ ಪವಿತ್ರಾ ಮೊದಲು ಈ ರೀತಿ ಇರಲಿಲ್ಲ. ಅವರು ನಟಿಸಿದ ಮೊದಲ ಸಿನಿಮಾ ‘ಅಗಮ್ಯ’. ಹಾರರ್ ಶೈಲಿಯಲ್ಲಿ ಈ ಸಿನಿಮಾ ಮೂಡಿಬಂದಿತ್ತು. ಇದರಿಂದ ಪವಿತ್ರಾ ವೃತ್ತಿ ಬದುಕು ಆರಂಭ ಆಯಿತು.
ನಿರ್ದೇಶಕ ಉಮೇಶ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರದ ಸೆಟ್ನಲ್ಲಿ ಪವಿತ್ರಾ ಗೌಡ ಹೇಗೆ ಕಾಣಿಸುತ್ತಿದ್ದರು ಎನ್ನುವ ಫೋಟೋಗಳು ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ.
ಪವಿತ್ರಾ ಆಗ ಸಖತ್ ಡಿ ಗ್ಲಾಮ್ ಆಗಿದ್ದರು. ನಂತರ ಅವರು ಸಂಪೂರ್ಣವಾಗಿ ಲುಕ್ ಬದಲಾಯಿತು. ಇದಕ್ಕೆಲ್ಲ ದರ್ಶನ್ ಅವರ ಗೆಳೆತನ ಹಾಗೂ ಅವರು ನೀಡುತ್ತಿದ್ದ ಹಣವೇ ಕಾರಣ ಎನ್ನಲಾಗಿದೆ.
ಆರಂಭದಲ್ಲಿ ಪವಿತ್ರಾ ಗೌಡಗೆ ನಟನೆಯಲ್ಲಿ ಆಸಕ್ತಿ ಇರಲಿಲ್ಲ. ನಟಿಯಾಗುವ ಲಕ್ಷಣಗಳೂ ಇರಲಿಲ್ಲ. 2011ರಲ್ಲಿ ‘ಅಗಮ್ಯ’ ಸಿನಿಮಾ ಶುರುವಾಯಿತು. 2013ರಲ್ಲಿ ಸಿನಿಮಾ ತೆರೆಗೆ ಬಂತು. ಸಿನಿಮಾ ರಂಗಕ್ಕೆ ಬರುವ ಮೊದಲೇ ಮದುವೆ ಆಗಿ ಮಗುವಿನ ತಾಯಿಯಾಗಿದ್ದರು ಪವಿತ್ರಾ.
ಮಿನಿ ಕೂಪರ್ ಕಾರ್ನಲ್ಲಿ ಶೂಟಿಂಗ್ ಪವಿತ್ರಾ ಬರುತ್ತಿದ್ದರು. ಕೋಣನಕುಂಟೆ ಕ್ರಾಸ್ನಲ್ಲಿ ಪವಿತ್ರಾ ಬಾಡಿಗೆ ಮನೆಯಲ್ಲಿದ್ದರು. ಆ ಬಳಿಕ ದರ್ಶನ್ ಜೊತೆ ಆಪ್ತತೆ ಬೆಳೆದ ಬಳಿಕ ಅವರೇ ಮನೆ ಹಾಗೂ ಕಾರನ್ನು ಕೊಡಿಸಿದ್ದರು.