ಸಿಎಂ ಸಿದ್ದರಾಮಯ್ಯ ಅವರನ್ನು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಭೇಟಿಯಾದರು.
ಚಿತ್ರಮಂದಿರಗಳ ಟಿಕೆಟ್ ದರ ಇಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಿಎಂ ಮುಂದೆ ಪದಾಧಿಕಾರಿಗಳು ಇರಿಸಿದ್ದಾರೆ.
ಡಿಜಿಟಲ್ ಪ್ರೊಜೆಕ್ಟರ್ಗಳನ್ನು ಖರೀದಿಸಲು ಚಿತ್ರಮಂದಿರ ಮಾಲೀಕರಿಗೆ 15 ಲಕ್ಷ ಸಹಾಯ ಧನ ನೀಡುವಂತೆ ಬೇಡಿಕೆ ಇರಿಸಿದ್ದಾರೆ.
ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿನ ಚಿತ್ರಮಂದಿರವನ್ನು ಉನ್ನತೀಕರಿಸುವಂತೆಯೂ ಬೇಡಿಕೆ ಇರಿಸಲಾಗಿದೆ.
ತಾತ್ಕಾಲಿಕ ಹಾಗೂ ಅರೆ ತಾತ್ಕಾಲಿಕ ಚಿತ್ರಮಂದಿರಗಳ ಅವಧಿ ವಿಸ್ತರಣೆ ಮಾಡುವಂತೆ ಮನವಿ ಮಾಡಲಾಗಿದೆ.
ಮಲ್ಟಿಪ್ಲೆಕ್ಸ್ಗಳ ಟಿಕೆಟ್ ದರ 250, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಟಿಕೆಟ್ ದರ 150ಕ್ಕೆ ನಿಗದಿಪಡಿಸುವಂತೆ ಮನವಿ.
ಮನವಿ ಸ್ವೀಕರಿಸಿರುವ ಸಿಎಂ ಸಿದ್ದರಾಮಯ್ಯ, ಪರಿಶೀಲಿಸುವುದಾಗಿ ತಿಳಿಸಿದ್ದಾರೆ.