- Kannada News Photo gallery PM Narendra Modi arrives in Kanniyakumari to embark on 45 hour dhyan at Vivekananda Rock Memorial
ಕನ್ಯಾಕುಮಾರಿ ತಲುಪಿದ ಪ್ರಧಾನಿ ಮೋದಿ; ವಿವೇಕಾನಂದ ಸ್ಮಾರಕದಲ್ಲಿ ಇಂದು ಸಂಜೆಯಿಂದ 45 ಗಂಟೆ ಧ್ಯಾನ
PM Modi in Kanniyakumari: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಚುನಾವಣಾ ಪ್ರಚಾರ ಮುಗಿಸಿ ತಮಿಳುನಾಡಿನ ಕನ್ಯಾಕುಮಾರಿಗೆ ತಲುಪಿದ್ದಾರೆ. ಸ್ವಾಮಿ ವಿವೇಕಾನಂದರು 'ಭಾರತ ಮಾತೆಯ' ಬಗ್ಗೆ ದೈವಿಕ ದರ್ಶನ ಪಡೆದಿದ್ದಾರೆಂದು ನಂಬಲಾದ ಧ್ಯಾನ ಮಂಟಪದಲ್ಲಿ ಇಂದು (ಗುರುವಾರ) ಸಂಜೆಯಿಂದ ಜೂನ್ 1ರ ಸಂಜೆಯವರೆಗೆ ಮೋದಿ ಧ್ಯಾನ ಮಾಡಲಿದ್ದಾರೆ.
Updated on:May 31, 2024 | 10:29 AM

ಸ್ವಾಮಿ ವಿವೇಕಾನಂದರು 'ಭಾರತ ಮಾತೆಯ' ಬಗ್ಗೆ ದಿವ್ಯ ದರ್ಶನ ಪಡೆದಿದ್ದಾರೆಂದು ನಂಬಲಾದ ಧ್ಯಾನ ಮಂಟಪದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೂನ್ 1ರ ಸಂಜೆಯವರೆಗೆ ಧ್ಯಾನ ಮಾಡಲಿದ್ದಾರೆ.

ಲೋಕಸಭೆ ಚುನಾವಣೆಯ ಕೊನೆಯ ಹಂತದ ಪ್ರಚಾರದ ಮುಕ್ತಾಯದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಕನ್ಯಾಕುಮಾರಿಗೆ ತೆರಳಿ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಜೂನ್ 1ರವರೆಗೆ ಧ್ಯಾನ ಮಾಡಲಿದ್ದಾರೆ.

ಪಾರ್ವತಿ ದೇವಿಯು ಸಹ ಅದೇ ಸ್ಥಳದಲ್ಲಿ ಭಗವಾನ್ ಶಿವನಿಗಾಗಿ ಕಾಯುತ್ತಾ ಒಂದೇ ಕಾಲಿನಲ್ಲಿ ನಿಂತು ಧ್ಯಾನ ಮಾಡಿದ್ದಳು ಎಂಬ ನಂಬಿಕೆಯಿದೆ. ಕನ್ಯಾಕುಮಾರಿ ಭಾರತದ ದಕ್ಷಿಣದ ತುದಿಯಾಗಿದೆ. ಇದಲ್ಲದೆ, ಇದು ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಗಳು ಸಂಧಿಸುವ ಸ್ಥಳವಾಗಿದೆ. ಇದು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಸಂಗಮ ಸ್ಥಳವಾಗಿದೆ. ಪ್ರಧಾನಿ ಮೋದಿಯವರು ಕನ್ಯಾಕುಮಾರಿಗೆ ಹೋಗುವ ಮೂಲಕ ರಾಷ್ಟ್ರೀಯ ಏಕತೆಯ ಸಂಕೇತವನ್ನು ನೀಡುತ್ತಿದ್ದಾರೆ.

ಕನ್ಯಾಕುಮಾರಿಗೆ ಪ್ರಧಾನಿ ಮೋದಿ ಆಗಮಿಸಿದ ನಂತರ ಅವರು ವಿವೇಕಾನಂದ ರಾಕ್ ಸ್ಮಾರಕಕ್ಕೆ ತೆರಳುವ ಮೊದಲು ನಗರದ ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಮೋದಿ ಅವರ ಭೇಟಿಗೆ ಮುಂಚಿತವಾಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ. 2000 ಪೊಲೀಸ್ ಸಿಬ್ಬಂದಿಗಳು ಅವರ ವಾಸ್ತವ್ಯದ ಸಮಯದಲ್ಲಿ ಕಾವಲು ಕಾಯಲಿದ್ದಾರೆ.

ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಭಾರತೀಯ ನೌಕಾಪಡೆ ಕೂಡ ಬಿಗಿಯಾದ ಕಟ್ಟೆಚ್ಚರವನ್ನು ನಿರ್ವಹಿಸಲಿದೆ. ಇಂದಿನಿಂದ ಶನಿವಾರದವರೆಗೆ ಪ್ರವಾಸಿಗರಿಗೆ ಕನ್ಯಾಕುಮಾರಿಯ ಕಡಲತೀರಕ್ಕೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಖಾಸಗಿ ದೋಣಿಗಳಿಗೆ ದೋಣಿ ನಡೆಸಲು ಅನುಮತಿಸಲಾಗುವುದಿಲ್ಲ ಎಂದು ಪಿಟಿಐ ತಿಳಿಸಿದೆ.

ಮೋದಿಯವರು 2014ರಲ್ಲಿ ಚುನಾವಣಾ ಪ್ರಚಾರದ ಕೊನೆಯಲ್ಲಿ ಶಿವಾಜಿ ನೇತೃತ್ವದ ಮರಾಠಾ ಪಡೆಗಳು ಮತ್ತು ಜನರಲ್ ಅಫ್ಜಲ್ ಖಾನ್ ನೇತೃತ್ವದ ಬಿಜಾಪುರ ಪಡೆಗಳ ನಡುವೆ ಯುದ್ಧ ನಡೆದ ಪ್ರತಾಪಗಢಕ್ಕೆ ಭೇಟಿ ನೀಡಿದ್ದರು. 2019ರಲ್ಲಿ ಲೋಕಸಭೆ ಚುನಾವಣೆ ಮುಗಿದ ಬಳಿಕ ಪ್ರಧಾನಿ ಮೋದಿ ಕೇದಾರನಾಥದ ವಿಶೇಷ ಗುಹೆಯಲ್ಲಿ ಧ್ಯಾನ ಮಾಡಿದ್ದರು.

ವಿವೇಕಾನಂದ ರಾಕ್ ಸ್ಮಾರಕಕ್ಕೆ ಪ್ರಧಾನಿ ಮೋದಿ ಭೇಟಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಕನ್ಯಾಕುಮಾರಿಯಲ್ಲಿ ತಮ್ಮ 48 ಗಂಟೆಗಳ ಧ್ಯಾನ ಪ್ರವಾಸದ ಮೂಲಕ ಮೋದಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿದ್ದಾರೆ. ಹೀಗಾಗಿ, ಇದು ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ನೋಡಿಕೊಳ್ಳಲು ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

ಜೂನ್ 1ರಂದು 7 ರಾಜ್ಯಗಳು ಮತ್ತು ಚಂಡೀಗಢ ಕೇಂದ್ರಾಡಳಿತ ಪ್ರದೇಶದ 57 ಸ್ಥಾನಗಳಲ್ಲಿ 7ನೇ ಮತ್ತು ಅಂತಿಮ ಹಂತದ ಲೋಕಸಭೆ ಚುನಾವಣೆಯ ಪ್ರಚಾರ ಇಂದು ಸಂಜೆ ಕೊನೆಗೊಂಡಿತು.
Published On - 9:20 pm, Thu, 30 May 24




