- Kannada News Photo gallery PM Narendra Modi in Badrinath: PM Modi visited Kedarnath and Badrinath Temple in Uttarakhand
PM Modi in Badrinath: ಬದರಿನಾಥ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ; ಹಲವು ಯೋಜನೆಗಳಿಗೆ ಚಾಲನೆ
ಕೇದಾರನಾಥದ ಬಳಿಕ ಬದರಿನಾಥಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಬಳಿಕ ಹೇಮಕುಂಡ್ ಸಾಹಿಬ್ ರೋಪ್‌ವೇ ಮತ್ತು ಕೆಲವೊಂದು ರಸ್ತೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಬದರಿನಾಥ ದೇವಾಲಯವನ್ನು ಹೂವಿನಿಂದ ಅಲಂಕರಿಸಲಾಗಿತ್ತು.
Updated on:Oct 21, 2022 | 3:49 PM

ಉತ್ತರಾಖಂಡದ ಬದರಿನಾಥ ದೇವಸ್ಥಾನಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ.

ಪ್ರಧಾನಿ ಮೋದಿಯವರ ಉತ್ತರಾಖಂಡ ಭೇಟಿಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ.

ಪ್ರಧಾನಿ ಮೋದಿ ಉತ್ತರಾಖಂಡದಲ್ಲಿ 3400 ಕೋಟಿ ರೂಪಾಯಿಗಳ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಉತ್ತರಾಖಂಡದ ಸಿಎಂ ಪುಷ್ಕರ್ ಸಿಂಗ್ ಧಾಮಿ ಜೊತೆ ಬದರಿನಾಥದಲ್ಲಿ ಮೋದಿ

ಬದರಿನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ನರೇಂದ್ರ ಮೋದಿ

ಬದರಿನಾಥಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿಯವರು ಬಳಿಕ ಹೇಮಕುಂಡ್ ಸಾಹಿಬ್ ರೋಪ್‌ವೇ ಮತ್ತು ಕೆಲವೊಂದು ರಸ್ತೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಮೋದಿ ಭೇಟಿ ಹಿನ್ನೆಲೆಯಲ್ಲಿ ಕೇದಾರನಾಥ ಮತ್ತು ಬದರಿನಾಥದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

ಬದರಿನಾಥ ದೇವಸ್ಥಾನದಲ್ಲಿ ಪ್ರಧಾನಿ ಮೋದಿ

ಬದರಿನಾಥದ ಸ್ಥಳೀಯ ವಸ್ತುಗಳ ಅಂಗಡಿಗಳನ್ನು ವೀಕ್ಷಿಸುತ್ತಿರುವ ಮೋದಿ

ಬದರಿನಾಥದಲ್ಲಿ ಅಭಿಮಾನಿಗಳತ್ತ ಕೈ ಬೀಸಿದ ಮೋದಿ

ಬದರಿನಾಥದ ಸ್ಥಳೀಯ ವಸ್ತುಗಳ ಅಂಗಡಿಗಳನ್ನು ವೀಕ್ಷಿಸುತ್ತಿರುವ ಮೋದಿ

ಈ ವರ್ಷ ಚಾರ್‌ಧಾಮ್‌ಗೆ ಭೇಟಿ ನೀಡಿದ ದಾಖಲೆಯ 41 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಸೇರಿದ್ದಾರೆ.

ಬದರಿನಾಥ ದೇಗುಲದಲ್ಲಿ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಮೋದಿ ನಂತರ ಮಾಣ ಗ್ರಾಮದಲ್ಲಿ ರಸ್ತೆ ಮತ್ತು ರೋಪ್ ವೇ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಬದರಿನಾಥ ದೇವಸ್ಥಾನಕ್ಕೆ ತೆರಳುವ ಮೊದಲು ಕೇದಾರನಾಥ ದೇಗುಲದಲ್ಲಿ ಪೂಜೆ ಸಲ್ಲಿಸಿದ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ ಪ್ರವಾಸದಲ್ಲಿದ್ದು, ಇಂದು ಬೆಳಗ್ಗೆ ಕೇದಾರನಾಥಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕೇದಾರನಾಥನ ಸನ್ನಿಧಿಯಲ್ಲಿ ಮೋದಿ

ಈ ವೇಳೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಉಡುಗೆ ಧರಿಸಿ ಗಮನ ಸೆಳೆದರು. ಹಿಮಾಚಲ ಪ್ರದೇಶದ ಚಂಬಾ ಮಹಿಳೆಯರು ಕೈಯಿಂದ ಮಾಡುವ ಉಡುಗೆಯನ್ನು ಮೋದಿ ಧರಿಸಿದ್ದರು. ಇದನ್ನು ಚೋಳ ಡೋರಾ ಉಡುಗೆ ಎಂದು ಕರೆಯಲಾಗುತ್ತದೆ.

ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಮತ್ತು ಜನಸಂದಣಿಯನ್ನು ನಿಯಂತ್ರಿಸಲು ಕೇದಾರನಾಥದಲ್ಲಿ ನಿರ್ಮಿಸಲಾದ ಹೊಸ ಮಂದಾಕಿನಿ ಆಸ್ತ ಪಥ ಮತ್ತು ಸರಸ್ವತಿ ಆಸ್ತ ಪಥವನ್ನು ಮೋದಿ ಪರಿಶೀಲಿಸಿದ್ದಾರೆ. ಬಳಿಕ ಈ ಯೋಜನೆಗಳನ್ನು ನಿರ್ಮಿಸಿದ ಕಾರ್ಮಿಕರೊಂದಿಗೆ ಸಂವಾದ ನಡೆಸಿದ್ದಾರೆ.

ಶಂಕರಾಚಾರ್ಯರ ಪ್ರತಿಮೆ ಬಳಿ ನರೇಂದ್ರ ಮೋದಿ

ಕೇದಾರನಾಥದಲ್ಲಿ ಮೋದಿ
Published On - 3:49 pm, Fri, 21 October 22



















