- Kannada News Photo gallery PM Narendra Modi promises to build super hit partnership with Nepal PM Pushpa Kamal Dahal Prachanda
ಭಾರತ, ನೇಪಾಳ ಸಾಂಸ್ಕೃತಿಕ ಸಂಬಂಧ ಬಲಪಡಿಸಲು ರಾಮಾಯಣ ಸರ್ಕ್ಯೂಟ್ ಯೋಜನೆ ತ್ವರಿತಗೊಳಿಸಬೇಕು: ಮೋದಿ
ಭಾರತ ಮತ್ತು ನೇಪಾಳ ನಡುವಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲು ರಾಮಾಯಣ ಸರ್ಕ್ಯೂಟ್‌ಗೆ ಸಂಬಂಧಿಸಿದ ಯೋಜನೆಗಳನ್ನು ತ್ವರಿತಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
Updated on: Jun 01, 2023 | 2:36 PM

2022ರ ಡಿಸೆಂಬರ್‌ನಲ್ಲಿ ಪ್ರಧಾನಿಯಾದ ನಂತರ ಪ್ರಚಂಡ ಅವರ ಮೊದಲ ದ್ವಿಪಕ್ಷೀಯ ವಿದೇಶ ಪ್ರವಾಸ ಇದಾಗಿದೆ. ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸಲು ನಾವು ಬದ್ಧರಾಗಿದ್ದೇವೆ ಎಂದು ನೇಪಾಳದ ಪ್ರಧಾನಿ ರಾಯಭಾರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.

ಪ್ರಧಾನಿ ಮೋದಿ ಮತ್ತು ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಅವರ ಸಮ್ಮುಖದಲ್ಲಿ ಭಾರತ ಮತ್ತು ನೇಪಾಳ ನಡುವೆ ಒಪ್ಪಂದಗಳ ವಿನಿಮಯ ನಡೆಯಿತು.

ಸಾರಿಗೆ ಒಪ್ಪಂದಗಳಿಗೆ ಇಂದು ಸಹಿ ಹಾಕಲಾಗಿದೆ. ಭೌತಿಕ ಸಂಪರ್ಕವನ್ನು ಹೆಚ್ಚಿಸಲು ನಾವು ಹೊಸ ರೈಲು ಸಂಪರ್ಕಗಳನ್ನು ಸ್ಥಾಪಿಸಿದ್ದೇವೆ. ಭಾರತ ಮತ್ತು ನೇಪಾಳ ನಡುವೆ ಇಂದು ದೀರ್ಘಾವಧಿಯ ವಿದ್ಯುತ್ ವ್ಯಾಪಾರ ಒಪ್ಪಂದವನ್ನು ಸ್ಥಾಪಿಸಲಾಗಿದೆ: ಮೋದಿ

ಭಾರತ ಮತ್ತು ನೇಪಾಳದ ನಡುವಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧಗಳು ಬಹಳ ಹಳೆಯದ್ದು. ಇದನ್ನು ಮತ್ತಷ್ಟು ಬಲಪಡಿಸಲು, ರಾಮಾಯಣ ಸರ್ಕ್ಯೂಟ್‌ಗೆ ಸಂಬಂಧಿಸಿದ ಯೋಜನೆಗಳನ್ನು ತ್ವರಿತಗೊಳಿಸಬೇಕು ಎಂದು ನಾವು ನಿರ್ಧರಿಸಿದ್ದೇವೆ ಎಂದು ಮೋದಿ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ

ನೇಪಾಳದ ಪ್ರಧಾನಿ ಪುಷ್ಪಾ ಕಮಲ್ ದಹಲ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ಪ್ರಧಾನಿ ಮೋದಿ ನೇಪಾಳಕ್ಕೆ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡಿದ್ದಾರೆ. ಅಂದು ಅವರು ಭಾರತ-ನೇಪಾಳ ಸಂಬಂಧಗಳಿಗೆ 'HIT' ಸೂತ್ರವನ್ನು ನೀಡಿದ್ದರು. ನಮ್ಮ ಪಾಲುದಾರಿಕೆ ನಿಜವಾಗಿಯೂ ಹಿಟ್ ಆಗಿದೆ ಎಂದು ಇಂದು ಹೇಳಲು ನನಗೆ ಸಂತೋಷವಾಗಿದೆ ಎಂದ ಮೋದಿ

ಪ್ರಧಾನಿ ಮೋದಿ ಮತ್ತು ಪುಷ್ಪ ಕಮಲ್ ದಹಲ್ 'ಪ್ರಚಂಡ' ಅವರು ಗುರುವಾರ ಬತ್ನಾಹಾದಿಂದ ನೇಪಾಳ ಕಸ್ಟಮ್ ಯಾರ್ಡ್‌ಗೆ ಭಾರತೀಯ ರೈಲ್ವೆ ಕಾರ್ಗೋ ರೈಲಿಗೆ ಚಾಲನೆ ನೀಡಿದ್ದಾರೆ.

ಇಬ್ಬರು ಪ್ರಧಾನ ಮಂತ್ರಿಗಳು ರೈಲ್ವೆಯ ಕುರ್ತಾ-ಬಿಜಲ್ಪುರ ವಿಭಾಗದ ಇ-ಯೋಜನೆಯನ್ನು ಸಹ ಅನಾವರಣಗೊಳಿಸಿದರು. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ಪ್ರಧಾನಿಯನ್ನು ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.









