ಪಂಜಾಬ್​ನ ಅಮೃತಸರದಲ್ಲಿರುವ ರಾಧಾ ಸೋಮಿ ಸತ್ಸಂಗ್​ಗೆ ಪ್ರಧಾನಿ ಮೋದಿ ಭೇಟಿ

Edited By:

Updated on: Nov 05, 2022 | 12:53 PM

ರಾಧಾ ಸೋಮಿ ಸತ್ಸಂಗವು ಅಮೃತಸರ ನಗರದಿಂದ ಸುಮಾರು 45 ಕಿಮೀ ದೂರದಲ್ಲಿರುವ ಬಿಯಾಸ್ ಪಟ್ಟಣದಲ್ಲಿದೆ. ಇಲ್ಲಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ.

1 / 6
ಪ್ರಧಾನಿ ನರೇಂದ್ರ ಮೋದಿ ಇಂದು (ಶನಿವಾರ) ಪಂಜಾಬ್‌ನ ಅಮೃತಸರದಲ್ಲಿರುವ ರಾಧಾ ಸೋಮಿ ಸತ್ಸಂಗ ಬಿಯಾಸ್ ದೇರಾಕ್ಕೆ ಭೇಟಿ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇಂದು (ಶನಿವಾರ) ಪಂಜಾಬ್‌ನ ಅಮೃತಸರದಲ್ಲಿರುವ ರಾಧಾ ಸೋಮಿ ಸತ್ಸಂಗ ಬಿಯಾಸ್ ದೇರಾಕ್ಕೆ ಭೇಟಿ ನೀಡಿದ್ದಾರೆ.

2 / 6

ಈ ವೇಳೆ ಅದರ ಮುಖ್ಯಸ್ಥ ಬಾಬಾ ಗುರಿಂದರ್ ಸಿಂಗ್ ಧಿಲ್ಲೋನ್ ಅವರನ್ನು ಮೋದಿ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ.

3 / 6

ಪಂಜಾಬ್ ಸಂಪುಟದ ಸಚಿವ ಬ್ರಹ್ಮ್ ಶಂಕರ್ ಜಿಂಪಾ ಅವರು ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಜಾಂಜುವಾ ಮತ್ತು ಡಿಜಿಪಿ ಗೌರವ್ ಯಾದವ್ ಉಪಸ್ಥಿತರಿದ್ದರು.

4 / 6

ಈ ಬಗ್ಗೆ ನಿನ್ನೆಯೇ ಟ್ವೀಟ್ ಮಾಡಿದ್ದ ನರೇಂದ್ರ ಮೋದಿ "ಬಾಬಾ ಗುರಿಂದರ್ ಸಿಂಗ್ ಧಿಲ್ಲೋನ್ ಅವರ ನಾಯಕತ್ವದಲ್ಲಿ ಆರ್‌ಎಸ್‌ಎಸ್‌ಬಿ ಹಲವಾರು ಸಮುದಾಯ ಸೇವಾ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದೆ. ನಾನು ನಾಳೆ ರಾಧಾ ಸೋಮಿ ಸತ್ಸಂಗ ಬಿಯಾಸ್​ಗೆ ಭೇಟಿ ನೀಡಲಿದ್ದೇನೆ" ಎಂದು ಹೇಳಿದ್ದರು.

5 / 6

ರಾಧಾ ಸೋಮಿ ಸತ್ಸಂಗವು ಅಮೃತಸರ ನಗರದಿಂದ ಸುಮಾರು 45 ಕಿಮೀ ದೂರದಲ್ಲಿರುವ ಬಿಯಾಸ್ ಪಟ್ಟಣದಲ್ಲಿದೆ. ಇದು ದೇಶಾದ್ಯಂತ ವಿಶೇಷವಾಗಿ ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಸಾಕಷ್ಟು ಅನುಯಾಯಿಗಳನ್ನು ಹೊಂದಿದೆ.

6 / 6

ಈ ವರ್ಷದ ಫೆಬ್ರವರಿಯಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ದೆಹಲಿಯಲ್ಲಿ ದೇರಾ ಮುಖ್ಯಸ್ಥರನ್ನು ಭೇಟಿ ಮಾಡಿದ್ದರು.

Loading...
Unable to load recommendations.
Follow Us