ವಿದೇಶಿ ಪ್ರವಾಸಿಗರ ಭೇಟಿಯಲ್ಲಿ ತಾಜ್​ ಮಹಲ್ ಹಿಂದಿಕ್ಕಿದ ಮಹಾಬಲಿಪುರಂ ದೇವಸ್ಥಾನ

ಮಹಾಬಲಿಪುರಂ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಇದು ಚೆನ್ನೈನಿಂದ ಸುಮಾರು 60 ಕಿ.ಮೀ ದೂರದಲ್ಲಿದೆ. ಭಾರತ ಪ್ರವಾಸೋದ್ಯಮ ಅಂಕಿಅಂಶ 2022 ರ ಪ್ರಕಾರ, ಈ ದೇವಸ್ಥನಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

TV9 Web
| Updated By: Rakesh Nayak Manchi

Updated on: Nov 06, 2022 | 8:00 AM

ತಮಿಳುನಾಡಿನ ಮಹಾಬಲಿಪುರಂ ನಗರವು ಸಮುದ್ರ ತೀರದಲ್ಲಿದೆ. ಈ ಪ್ರಾಚೀನ ನಗರದ ಇತಿಹಾಸ ಪ್ರಸಿದ್ಧವಾದುದು. ಈ ನಗರವು ಭವ್ಯವಾದ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಮಹಾಬಲಿಪುರಂನ ಜನಪ್ರಿಯತೆ ವೇಗವಾಗಿ ಹೆಚ್ಚುತ್ತಿದ್ದು, ಪ್ರತಿ ವರ್ಷ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ. ಭಾರತದ ಪ್ರವಾಸೋದ್ಯಮ ಅಂಕಿಅಂಶಗಳು 2022ರ ಪ್ರಕಾರ, 2021-22ರಲ್ಲಿ ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರವಾಸಿಗರು ಮಹಾಬಲಿಪುರಂಗೆ ಬಂದಿದ್ದಾರೆ.

Indian Tourist Places Increase in foreign tourist visits to Mahabalipuram temple kannada news

1 / 6
ವರದಿಯ ಪ್ರಕಾರ, 2021-22ರಲ್ಲಿ 1,44,984 ವಿದೇಶಿ ಪ್ರವಾಸಿಗರು ಮಹಾಬಲಿಪುರಂ ಅಥವಾ ಮಾಮಲ್ಲಪುರಕ್ಕೆ ಬಂದಿದ್ದಾರೆ. ಈ ಸಂಖ್ಯೆಯು ಟಿಕೆಟ್‌ಗಳನ್ನು ಬಳಸಿಕೊಂಡು ಟಾಪ್ 10 ಅತ್ಯಂತ ಜನಪ್ರಿಯ ಮತ್ತು ಕೇಂದ್ರೀಯ ಸಂರಕ್ಷಿತ ಸ್ಮಾರಕಗಳಿಗೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರಲ್ಲಿ ಶೇಕಡಾ 45.50 ಆಗಿದೆ.

Indian Tourist Places Increase in foreign tourist visits to Mahabalipuram temple kannada news

2 / 6
Indian Tourist Places Increase in foreign tourist visits to Mahabalipuram temple kannada news

ಈ ಅಂಕಿಅಂಶಗಳ ಪ್ರಕಾರ, ತಾಜ್ ಮಹಲ್ 38 ಸಾವಿರ ಪ್ರವಾಸಿಗರೊಂದಿಗೆ ಎರಡನೇ ಸ್ಥಾನದಲ್ಲಿದೆ.

3 / 6
Indian Tourist Places Increase in foreign tourist visits to Mahabalipuram temple kannada news

ಮಹಾಬಲಿಪುರಂ ನಗರಕ್ಕೆ ರಾಕ್ಷಸ ರಾಜ ಮಹಾಬಲಿಯ ಹೆಸರನ್ನು ಇಡಲಾಯಿತು. ಇಲ್ಲಿರುವ ಅನೇಕ ದೇವಾಲಯಗಳು ಈ ಸ್ಥಳದ ಸೌಂದರ್ಯವನ್ನು ಹೆಚ್ಚಿಸುತ್ತಿವೆ.

4 / 6
Indian Tourist Places Increase in foreign tourist visits to Mahabalipuram temple kannada news

ಶೋರ್ ಮಂದಿರ ಮತ್ತು ಪಂಚ ರಥ ಮಂದಿರ: ಶೋರ್ ಮಂದಿರವು ಪ್ರಾಚೀನ ಕಲೆಯ ಉದಾಹರಣೆಯಾಗಿದೆ. ಈ ದೇವಾಲಯವು ಗ್ರಾನೈಟ್ ಕಲ್ಲಿನಿಂದ ಮಾಡಲ್ಪಟ್ಟಿದೆ. ಪಂಚ ರಥ ಅಥವಾ ಪಂಚ ಪಾಂಡವರ ರಥ ಎಂಬ ದೇವಾಲಯವಿದೆ. ಇದು ಸ್ಮಾರಕ ಸಂಕೀರ್ಣವಾಗಿದೆ.

5 / 6
Indian Tourist Places Increase in foreign tourist visits to Mahabalipuram temple kannada news

ಕೃಷ್ಣನ ಬೆಣ್ಣೆ ಚೆಂಡು: ಇದು ಸುಮಾರು 1200 ವರ್ಷಗಳಷ್ಟು ಹಳೆಯದಾದ ಕಲ್ಲು. ಈ ಕಲ್ಲು ಇಳಿಜಾರಿನ ಬೆಟ್ಟದ ಮೇಲೆ ನಿಂತಿದೆ. ಈ ಕಲ್ಲನ್ನು ಕೃಷ್ಣನು ತನ್ನ ಬಾಲ್ಯದಲ್ಲಿ ಬೀಳಿಸಿದನೆಂದು ನಂಬಲಾಗಿದೆ.

6 / 6
Follow us