- TV9 Kannada Kannada News Photos Poco india set to launch its new phone poco c61 today at 12pm in India
ಭಾರತದಲ್ಲಿಂದು ಬಹುನಿರೀಕ್ಷಿತ ಪೋಕೋ C61 ಸ್ಮಾರ್ಟ್ಫೋನ್ ಬಿಡುಗಡೆ
Poco C61 India Launch Today: ಪೋಕೋ ಇಂಡಿಯಾ ತನ್ನ ಅಧಿಕೃತ X ಖಾತೆಯ ಮೂಲಕ ಪೋಕೋ C61 ಬಿಡುಗಡೆಯನ್ನು ಮಾರ್ಚ್ 26 ರಂದು ಮಧ್ಯಾಹ್ನ 12 ಗಂಟೆಗೆ ಮಾಡಲಾಗುವುದು ಎಂದು ಘೋಷಿಸಿದೆ. ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್ಕಾರ್ಟ್ ಫೋನ್ನ ವಿನ್ಯಾಸ ಮತ್ತು ಕೆಲವು ಫೀಚರ್ಗಳ ಕುರಿತು ಕೆಲ ಮಾಹಿತಿ ಹಂಚಿಕೊಂಡಿದೆ.
Updated on: Mar 26, 2024 | 6:55 AM

ಪ್ರಸಿದ್ಧ ಪೋಕೋ ಸಂಸ್ಥೆ ಭಾರತದಲ್ಲಿ ಹೊಸ ಸ್ಮಾರ್ಟ್ಫೋನ್ ಒಂದನ್ನು ಇಂದು ಬಿಡುಗಡೆ ಮಾಡಲಿದೆ. ಪೋಕೋದ ನೂತನ ಪೋಕೋ C61 (Poco C61) ಮಂಗಳವಾರ ಭಾರತದಲ್ಲಿ ರಿಲೀಸ್ ಆಗಲಿದೆ ಎಂದು ಪೋಕೋ ಇಂಡಿಯಾ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಮೂಲಕ ದೃಢಪಡಿಸಿದೆ. ಈ ಹ್ಯಾಂಡ್ಸೆಟ್ ಫ್ಲಿಪ್ಕಾರ್ಟ್ ಮೂಲಕ ಮಾರಾಟ ಕಾಣಲಿದೆ.

ಪೋಕೋ ಇಂಡಿಯಾ ತನ್ನ ಅಧಿಕೃತ X ಖಾತೆಯ ಮೂಲಕ ಪೋಕೋ C61 ಬಿಡುಗಡೆಯನ್ನು ಮಾರ್ಚ್ 26 ರಂದು ಮಧ್ಯಾಹ್ನ 12 ಗಂಟೆಗೆ ಮಾಡಲಾಗುವುದು ಎಂದು ಘೋಷಿಸಿದೆ. ಟೀಸರ್ ಪ್ರಕಾರ, ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ನೊಂದಿಗೆ ಬರುತ್ತದೆ. ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್ಕಾರ್ಟ್ ಫೋನ್ನ ವಿನ್ಯಾಸ ಮತ್ತು ಕೆಲವು ಫೀಚರ್ಗಳ ಕುರಿತು ಕೆಲ ಮಾಹಿತಿ ಹಂಚಿಕೊಂಡಿದೆ.

ಫ್ಲಿಪ್ಕಾರ್ಟ್ ಮೈಕ್ರೋಸೈಟ್ ಪೋಕೋ C61 ಗಾಗಿ 90Hz HD+ ಡಿಸ್ಪ್ಲೇಯನ್ನು ಖಚಿತಪಡಿಸಿದೆ. ಇದು 6GB RAM ಅನ್ನು ಪ್ಯಾಕ್ ಮಾಡುತ್ತದೆ ಮತ್ತು ಉತ್ತಮ ಬಹುಕಾರ್ಯಕಕ್ಕಾಗಿ ಬಳಕೆದಾರರು ಹೆಚ್ಚುವರಿ 6GB ವರ್ಚುವಲ್ RAM ಅನ್ನು ಪಡೆಯಬಹುದು. ಇದು 5,000mAh ಬ್ಯಾಟರಿಯನ್ನು ಒಳಗೊಂಡಿದೆ ಎಂದು ದೃಢಪಡಿಸಲಾಗಿದೆ.

ಪೋಕೋ C61 ಸ್ಮಾರ್ಟ್ಫೋನ್ ರೆಡ್ಮಿ A3 ನ ರೀಬ್ರಾಂಡೆಡ್ ಆವೃತ್ತಿಯಾಗಿ ಬರಲಿದೆ ಎಂಬ ಮಾತು ಕೂಡ ಇದೆ. ಇದನ್ನು 4GB + 64GB ಮತ್ತು 6GB + 128GB RAM ಮತ್ತು ಸ್ಟೋರೇಜ್ ರೂಪಾಂತರಗಳಲ್ಲಿ ನೀಡಬಹುದು. ಇವುಗಳ ಬೆಲೆ ಬಹಿರಂಗಗೊಂಡಿಲ್ಲ. ಆದರೆ, ಮೂಲಗಳ ಪ್ರಕಾರ ಇದರ ಬೆಲೆ ಕ್ರಮವಾಗಿ 7,499 ರೂ. ಮತ್ತು 8,499 ರೂ. ಇರಬಹುದು.

ಪೋಕೋ C61 ನಲ್ಲಿ 6.71 -ಇಂಚಿನ HD+ LCD ಡಿಸ್ಪ್ಲೇ ಮತ್ತು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ. ಇದು ಮೀಡಿಯಾಟೆಕ್ ಹಿಲಿಯೊ G36 SoC ನಲ್ಲಿ 6GB ಯ RAM ಮತ್ತು 128GB ವರೆಗಿನ ಆನ್ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ. ಇದು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸಂವೇದಕವನ್ನು ಒಳಗೊಂಡಿರಬಹುದು.

ಕ್ಯಾಮೆರಾ ವಿಚಾರಕ್ಕೆ ಬಂದರೆ, ಪೋಕೋ C61 ಫೋನ್ 8-ಮೆಗಾಪಿಕ್ಸೆಲ್ ಪ್ರಾಥಮಿಕ ಹಿಂಭಾಗದ ಸಂವೇದಕ ಮತ್ತು 0.08-ಮೆಗಾಪಿಕ್ಸೆಲ್ ದ್ವಿತೀಯ ಸಂವೇದಕದೊಂದಿಗೆ ಬರಬಹುದು. ಮುಂಭಾಗದಲ್ಲಿ 5-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ ಎಂದು ಸೂಚಿಸಲಾಗಿದೆ. ಇದು 10W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 5,000mAh ಬ್ಯಾಟರಿ ಇದೆ.

Tv9 ಕನ್ನಡ ಡಿಜಿಟಲ್ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.
Read More



