
ಪೂಜಾ ಹೆಗ್ಡೆ ‘ಎಫ್ 3’ ಸಿನಿಮಾ ಪ್ರಚಾರ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಟ್ರೇಲರ್ ಮೂಲಕ ಗಮನ ಸೆಳೆದಿದೆ.

‘ರಾಧೆ ಶ್ಯಾಮ್’,‘ಬೀಸ್ಟ್’, ‘ಆಚಾರ್ಯ’ ಸಿನಿಮಾಗಳ ಸೋಲಿನಿಂದ ಪೂಜಾ ಹೆಗ್ಡೆ ಬೇಸರಗೊಂಡಿದ್ದಾರೆ. ಅವರಿಗೆ ತುರ್ತಾಗಿ ಒಂದು ಗೆಲುವಿನ ಅವಶ್ಯಕತೆ ಇದೆ.

‘ಎಫ್ 3’ ಸಿನಿಮಾದಿಂದ ಪೂಜಾ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ‘ಸರ್ಕಸ್’ ಹಾಗೂ ‘ಕಭಿ ಈದ್ ಕಭಿ ದಿವಾಲಿ’ ಚಿತ್ರದಲ್ಲಿ ಪೂಜಾ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸಲ್ಲು ಜತೆ ಅವರು ತೆರೆ ಹಂಚಿಕೊಂಡಿದ್ದಾರೆ.

‘ಎಫ್ 3’ ಪ್ರಮೋಷನ್ ವೇಳೆ ಹಳದಿ ಬಣ್ಣದ ಡ್ರೆಸ್ ತೊಟ್ಟು ಮಿಂಚಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

ಪೂಜಾ ಹೆಗ್ಡೆ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 2 ಕೋಟಿ ಹಿಂಬಾಲಕರು ಇದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ.
Published On - 4:00 pm, Wed, 25 May 22