ದೈನಂದಿನ ಜೀವನದಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ: ಹೃದಾಯಾಘಾತದಿಂದ ದೂರವಿರಿ
ಚಳಿಗಾಲದಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚು ಕಾಣಿಸಿಕೊಳ್ಳುತ್ತದೆ. ಹೀಗಾಗಿ ದೈನಂದಿನ ಅಭ್ಯಾಸದಿಂದಲೇ ಹೃದಯ ಹಾಗೂ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಫೋರ್ಟೀಸ್ ಆಸ್ಪತ್ರೆಯ ಡಾ ಜಾಕಿಯಾ ಖಾನ್ ಅವರು ಕೆಲವು ಟಿಪ್ಸ್ಗಳನ್ನು ನೀಡಿದ್ದಾರೆ ಇಲ್ಲಿದೆ ನೋಡಿ. (ಹಿಂದೂಸ್ತಾನ್ ಟೈಮ್ಸ್ ವರದಿ ಆಧರಿಸಿ ಮಾಹಿತಿ ನೀಡಲಾಗಿದೆ).
Updated on:Jan 18, 2022 | 3:20 PM

ಮದ್ಯಪಾನ ಮತ್ತು ಧೂಮಪಾನದ ಸೇವನೆಯನ್ನು ತ್ಯಜಿಸಿ. ಇಲ್ಲವಾದರೆ ಈ ಅಭ್ಯಾಸಗಳು ಚಳಿಗಾಲದಲ್ಲಿ ನಿಮ್ಮ ಹೃದಯಕ್ಕೆ ಕುತ್ತು ತರಬಹುದು.

ನಿಮ್ಮ ಒತ್ತಡವನ್ನು ನಿಭಾಯಿಸಿಕೊಳ್ಳಿ. ಅತಿಯಾದ ಒತ್ತಡದಿಂದ ನಿಮ್ಮ ಹೃದಯಕ್ಕೆ ಹಾನಿಯಾಗುತ್ತದೆ.

ಪೇಂಟಿಂಗ್, ಓದುವುದು, ಹೀಗೆ ನಿಮ್ಮ ನೆಚ್ಚಿನ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. ಇದು ನಿಮ್ಮ ಒತ್ತಡವನ್ನು ನಿವಾರಿಸಿ ಹೃದಯವನ್ನು ಸುರಕ್ಷಿತವಾಗಿಡುತ್ತದೆ.

ರಾತ್ರಿ ಚೆನ್ನಾಗಿ ನಿದ್ರಿಸಿ. ನಿದ್ದೆ ನಿಮ್ಮ ಒತ್ತಡ, ಅನಾರೋಗ್ಯವನ್ನು ನಿವಾರಿಸುತ್ತದೆ. ಹೃದಯವನ್ನೂ ಆರೋಗ್ಯಯುತವಾಗಿಡುತ್ತದೆ.

ಪ್ರತಿದಿನ ಕನಿಷ್ಠ 30 ನಿಮಿಷವಾದರೂ ವ್ಯಾಯಾಮ ಮಾಡಿ. ಚಳಿಯ ವಾತಾವರಣದ ವೇಳೆ ಮನೆಯ ಒಳಗೆ ಮಾಡುವಂತಹ ವ್ಯಾಯಾಮ ಅಭ್ಯಸಿಸಿಕೊಳ್ಳಿ.

ಹೆಚ್ಚು ಸಿಹಿ ಮತ್ತು ಉಪ್ಪಿನ ಆಹಾರಕ್ಕೆ ಕಡಿವಾಣವಿರಲಿ. ಹಣ್ಣು, ತರಕಾರಿಗಳನ್ನು ಒಳಗೊಂಡ ಸಲಾಡ್ಗಳನ್ನು ಹೆಚ್ಚು ಸೇವಿಸಿ.

ರಕ್ತದೊತ್ತಡ, ಮಧುಮೇಹ, ರಕ್ತದಲ್ಲಿನ ಸಕ್ಕರೆ ಪ್ರಮಾಣದ ಬಗ್ಗೆ ನಿಗಾ ವಹಿಸಿ.

ಚಳಿಗಾಲದಲ್ಲಿ ದೇಹ ಹೆಚ್ಚು ಬೆವರಿವುದಿಲ್ಲ. ಆದರೆ ದೇಹಕ್ಕೆ ಬೇಕಾದಷ್ಟು ನೀರನ್ನು ಸೇವಿಸಿ. ದಿನಕ್ಕೆ ಕನಿಷ್ಠ 2 ಲೀ ನೀರಿನ ಸೇವನೆ ಉತ್ತಮ ಎನ್ನುತ್ತಾರೆ ತಜ್ಞರು
Published On - 3:17 pm, Tue, 18 January 22




