ನಟಿ ರಾಗಿಣಿ ಚಂದ್ರನ್ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಡ್ಯಾನ್ಸರ್ ಆಗಿ, ಯೋಗ ಟೀಚರ್ ಆಗಿಯೂ ರಾಗಿಣಿ ಚಂದ್ರನ್ ಗುರುತಿಸಿಕೊಂಡಿದ್ದಾರೆ.
ರಾಗಿಣಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹೊಸ ಫೋಟೋ ಹಂಚಿಕೊಳ್ಳುತ್ತಾರೆ. ಈಗ ಅವರು ಹಂಚಿಕೊಂಡಿರುವ ಹೊಸ ಫೋಟೋ ವೈರಲ್ ಆಗಿದೆ.
ರಾಗಿಣಿ ಅವರು ‘ಲಾ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ಕೆಲವು ಸಿನಿಮಾಗಳಲ್ಲಿ ರಾಗಿಣಿ ನಟಿಸಿದ್ದಾರೆ.
‘ಶಾನುಭೋಗರ ಮಗಳು’ ಚಿತ್ರದಲ್ಲಿ ರಾಗಿಣಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಡಿ ಗ್ಲಾಮ್ ಲುಕ್ನಲ್ಲಿ ಗಮನ ಸೆಳೆಯಲಿದ್ದಾರೆ.
2014ರಲ್ಲಿ ಪ್ರಜ್ವಲ್ ದೇವರಾಜ್ ಅವರನ್ನು ರಾಗಿಣಿ ಮದುವೆ ಆದರು. ಇಬ್ಬರೂ ಹಾಯಾಗಿ ಸುಖ ಸಂಸಾರ ನಡೆಸಿಕೊಂಡು ಬರುತ್ತಿದ್ದಾರೆ.
ರಾಗಿಣಿ ವೃತ್ತಿ ಜೀವನಕ್ಕೆ ಪ್ರಜ್ವಲ್ ದೇವರಾಜ್ ಬೆಂಬಲವಾಗಿ ನಿಂತಿದ್ದಾರೆ. ಪ್ರಜ್ವಲ್ ವೃತ್ತಿ ಜೀವನಕ್ಕೂ ರಾಗಿಣಿ ಬೆಂಬಲ ಕೊಡುತ್ತಾ ಬರುತ್ತಿದ್ದಾರೆ.
ರಾಗಿಣಿ ಚಂದ್ರನ್ ಅವರ ಹೊಸ ಫೋಟೋಸ್