
ನಟಿ ಪ್ರಣಿತಾ ಸುಭಾಷ್ ಅವರು ಮಗುವಿನ ಫೋಟೋ ಹಂಚಿಕೊಂಡಿದ್ದಾರೆ. ಈ ಕ್ಯೂಟ್ ಫೋಟೋಗಳು ಅಭಿಮಾನಿಗಳ ವಲಯದಲ್ಲಿ ವೈರಲ್ ಆಗುತ್ತಿವೆ.

ಮುದ್ದಾದ ಹೆಣ್ಣು ಮಗುವಿನ ಫೋಟೋಶೂಟ್ ಮಾಡಿಸಲಾಗಿದೆ. ಫೋಟೋದ ಜೊತೆಗೆ ಮಗು ಹೆಸರನ್ನು ಪ್ರಣಿತಾ ಸುಭಾಷ್ ತಿಳಿಸಿದ್ದಾರೆ. ಆರ್ನಾ ಎಂದು ಅವರು ಹೆಸರು ಇಟ್ಟಿದ್ದಾರೆ.

ಮಗು ಮುಖ ತೋರಿಸಬೇಕು ಎಂದು ಅಭಿಮಾನಿಗಳು ಪದೇಪದೇ ಮನವಿ ಮಾಡುತ್ತಲೇ ಇದ್ದರು. ಅದಕ್ಕಾಗಿ ಹೊಸ ಫೋಟೋವನ್ನು ಪ್ರಣಿತಾ ಹಂಚಿಕೊಂಡಿದ್ದಾರೆ.

ಈ ವರ್ಷ ಜೂನ್ ತಿಂಗಳಲ್ಲಿ ಪ್ರಣಿತಾ ಸುಭಾಷ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆಸ್ಪತ್ರೆಯಿಂದ ಫೋಟೋ ಹಂಚಿಕೊಳ್ಳುವ ಮೂಲಕ ಅವರು ಖುಷಿ ಸುದ್ದಿ ನೀಡಿದ್ದರು.

ಹಲವು ಸಿನಿಮಾಗಳಲ್ಲಿ ನಟಿಸಿರುವ ಪ್ರಣಿತಾ ಸುಭಾಷ್ ಅವರು ನಿತಿನ್ ರಾಜು ಜೊತೆ 2021ರಲ್ಲಿ ವಿವಾಹವಾದರು. ಮಗುವಿನ ಆರೈಕೆಯಲ್ಲಿ ಈ ಜೋಡಿ ಬ್ಯುಸಿ ಆಗಿದೆ.
Published On - 12:26 pm, Mon, 1 August 22