ಪ್ರಶಾಂತ್ ಗೌಡ ಮದುವೆ ಆಗುತ್ತಿರುವ ಕೃತಿ ಗೌಡ ಯಾರು? ಇಲ್ಲಿದೆ ಅವರ ಹಿನ್ನೆಲೆ
ಹಾಸ್ಯ ನಟ ಪ್ರಶಾಂತ್ ಗೌಡ ಅವರ ನಿಶ್ಚಿತಾರ್ಥ ಇತ್ತೀಚೆಗೆ ನೆರವೇರಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ಸುಂದರ ಫೋಟೋಗಳು ವೈರಲ್ ಆಗಿವೆ. ಹಾಗಾದರೆ, ಪ್ರಶಾಂತ್ ಗೌಡ ಅವರನ್ನು ವಿವಾಹ ಆಗುತ್ತಿರುವ ಹುಡುಗಿ ಯಾರು? ಅವರ ಹಿನ್ನೆಲೆ ಏನು? ಆ ಬಗ್ಗೆ ಇಲ್ಲಿದೆ ವಿವರ.
Updated on: Apr 21, 2026 | 6:56 AM

ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಶಾಂತ್ ಗೌಡ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅವರ ನಿಶ್ಚಿತಾರ್ಥ ಇತ್ತೀಚೆಗೆ ನೆರವೇರಿದೆ. ಅದರ ಸುಂದರ ಫೋಟೋಗಳು ವೈರಲ್ ಆಗಿವೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸಿದ್ದಾರೆ.

ಪ್ರಶಾಂತ್ ಗೌಡ ಅವರು ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ಹಾಸ್ಯಕ್ಕೆ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಾದರೆ, ಅವರು ಮದುವೆ ಆಗುತ್ತಿರುವ ಹುಡುಗಿ ಯಾರು? ಆ ಬಗ್ಗೆ ಇಲ್ಲಿದೆ ವಿವರ.

ಪ್ರಶಾಂತ್ ಗೌಡ ವಿವಾಹ ಆಗುತ್ತಿರುವ ಹುಡುಗಿಯ ಹೆಸರು ಕೃತಿ ಗೌಡ. ಅವರು ಕೂಡ ಬಣ್ಣದ ಲೋಕದ ಹಿನ್ನೆಲೆಯನ್ನೇ ಹೊಂದಿದ್ದಾರೆ ಎಂಬುದು ವಿಶೇಷ. ಇವರ ಪರಿಚಯ ಹೇಗಾಯಿತು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಕೃತಿ ಗೌಡ ಅವರು ‘ಬ್ರೇಕ್ ಫೇಲ್ಯೂರ್’ ಹೆಸರಿನ ಸಿನಿಮಾ ಮಾಡಿದ್ದರು. ಈ ಮೂಲಕ ಅವರು ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿರೋದು ಪಕ್ಕಾ ಆಗಿದೆ. ಅವರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪ್ರಶಾಂತ್ ಶೀಘ್ರವೇ ರಿವೀಲ್ ಮಾಡಬಹುದು.

ಪ್ರಶಾಂತ್ ಗೌಡ ಅವರು ‘ಗಿಚ್ಚಿ ಗಿಲಿ ಗಿಲಿ’ ಮೂಲಕ ಗಮನ ಸೆಳೆದರು. ಮೊದಲ ಮೂರು ಸೀಸನ್ಗಳಲ್ಲಿ ಅವರು ಕಾಣಿಸಿಕೊಂಡರು.

ರಾಜೇಶ್ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



