ಜ.23ರಂದು ‘ಲವ್ಲಿ ಸ್ಟಾರ್’ ಪ್ರೇಮ್ ಪುತ್ರಿ ಅಮೃತಾ ಜನ್ಮದಿನದ. ಮಗಳಿಗೆ ಮನಸಾರೆ ವಿಶ್ ಮಾಡಿರುವ ಪ್ರೇಮ್ ಅವರು ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
‘ಹ್ಯಾಪಿ ಬರ್ತ್ಡೇ ನನ್ನ ಬಂಗಾರ ದೇವತೆಗೆ. ಅಪರಿಮಿತ ಆನಂದ ಸದಾ ನಿನ್ನದಾಗಲಿ’ ಎಂದು ಪ್ರೇಮ್ ಶುಭ ಹಾರೈಸಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ನಟಿ ಅಮೂಲ್ಯ, ಖುಷಿ ರವಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪ್ರೇಮ್ ಪುತ್ರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಪ್ರೇಮ್ ಮತ್ತು ಜ್ಯೋತಿ ದಂಪತಿ ಮಗಳಿಗೆ ಮುತ್ತಿಡುತ್ತಿರುವ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಮೃತಾ ಅವರ ಬಾಲ್ಯದ ಫೋಟೋವನ್ನು ಜ್ಯೋತಿ ಪ್ರೇಮ್ ಹಂಚಿಕೊಂಡಿದ್ದಾರೆ. ಮುದ್ದು ಮಗಳ ಭವಿಷ್ಯಕ್ಕೆ ಒಳಿತಾಗಲಿ ಎಂದು ಅವರು ವಿಶ್ ಮಾಡಿದ್ದಾರೆ.
‘ನೀನೀಗ ಹದಿಹರೆಯವನ್ನು ಅಧಿಕೃತವಾಗಿ ದಾಟಿ ಹೊರಬಂದಿರುವೆ. ಖುಷಿಯ ಹೊಸ ದಶಕಕ್ಕೆ ಕಾಲಿಟ್ಟಿರುವೆ. ನಿನ್ನ ಭವಿಷ್ಯ ಹೇಗಿರಲಿದೆ ಅಂತ ತಿಳಿಯಲು ನಾನು ಉತ್ಸುಕಳಾಗಿರುವೆ’ ಎಂದು ಅಮೃತಾ ತಾಯಿ ಜ್ಯೋತಿ ಹಾರೈಸಿದ್ದಾರೆ.