CWG 2022: 10 ಕಿ.ಮೀ ನಡಿಗೆಯಲ್ಲಿ ಬೆಳ್ಳಿ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಪ್ರಿಯಾಂಕಾ ಗೋಸ್ವಾಮಿ..!
CWG 2022: ಈ ಗೆಲುವಿನೊಂದಿಗೆ ಪ್ರಿಯಾಂಕಾ ಗೋಸ್ವಾಮಿ ಇತಿಹಾಸ ಸೃಷ್ಟಿಸಿದ್ದು, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Updated on:Aug 06, 2022 | 4:30 PM

ಭಾರತದ ಅಥ್ಲೀಟ್ ಪ್ರಿಯಾಂಕಾ ಗೋಸ್ವಾಮಿ ಮಹಿಳೆಯರ 10 ಸಾವಿರ ಮೀಟರ್ ಓಟದ ನಡಿಗೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಆಟಗಾರ ಅತ್ಯುತ್ತಮ ಪ್ರದರ್ಶನ ನೀಡಿ ದೇಶಕ್ಕೆ ಪದಕ ತಂದುಕೊಟ್ಟಿದ್ದಾರೆ. ಪ್ರಿಯಾಂಕಾ 43:38.82 ರಲ್ಲಿ ಓಟವನ್ನು ಪೂರ್ಣಗೊಳಿಸಿದರು.

ಈ ಗೆಲುವಿನೊಂದಿಗೆ ಪ್ರಿಯಾಂಕಾ ಗೋಸ್ವಾಮಿ ಇತಿಹಾಸ ಸೃಷ್ಟಿಸಿದ್ದು, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರಿಯಾಂಕಾ ಗೋಸ್ವಾಮಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು ಆದರೆ ಅವರು 17 ನೇ ಸ್ಥಾನ ಪಡೆದರು. ಆದರೆ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಈ ಆಟಗಾರ ಅದ್ಭುತ ಪ್ರದರ್ಶನ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಪ್ರಿಯಾಂಕಾ ಗೋಸ್ವಾಮಿ ಮೊದಲು ಜಿಮ್ನಾಸ್ಟ್ ಆಗಬೇಕೆಂದು ಬಯಸಿದ್ದರು. ಆದರೆ ಅವರು ಅಥ್ಲೆಟಿಕ್ಸ್‌ನಲ್ಲಿ ಪಡೆದ ಪ್ರತಿಫಲಗಳತ್ತ ಆಕರ್ಷಿತರಾದರು. 2021 ಫೆಬ್ರವರಿಯಲ್ಲಿ, ಪ್ರಿಯಾಂಕಾ 20 ಕಿಮೀ ನೆಡಿಗೆಯನ್ನು ದಾಖಲೆಯ ಟೈಮಿಂಗ್‌ನೊಂದಿಗೆ ಗೆದ್ದಿದ್ದರು.

ಪ್ರಿಯಾಂಕಾ ಗೋಸ್ವಾಮಿ 1:28.45 ದಾಖಲೆಯ ಟೈಮಿಂಗ್‌ನೊಂದಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ಮುಜಾಫರ್‌ನಗರದ ಈ ಅಥ್ಲೀಟ್ ಪ್ರಮುಖ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮೊದಲ ಬಾರಿಗೆ ಪದಕ ಗೆದ್ದಿದ್ದಾರೆ.
Published On - 4:07 pm, Sat, 6 August 22




