
ಕಬಡ್ಡಿ ಅಂಗಳದ ಮದಗಜಗಳ ಕಾಳಗ ಎಂದೇ ಬಿಂಬಿತವಾಗಿರುವ ಪ್ರೋ ಕಬಡ್ಡಿ ಲೀಗ್ (Pro Kabaddi League Season 8 ) ಸೀಸನ್ 8ಗೆ ದಿನಗಣನೆ ಶುರುವಾಗಿದೆ.

ಡಿಸೆಂಬರ್ 22 ರಿಂದ ಶುರುವಾಗಲಿರುವ 8ನೇ ಸೀಸನ್ನ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯು ಮುಂಬಾ ಮುಖಾಮುಖಿಯಾಗಲಿದೆ. ಇನ್ನು ಪ್ರತಿದಿನ ಮೂರು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯವು ಸಂಜೆ 7:30 ಕ್ಕೆ ಶುರುವಾದರೆ, ಎರಡನೇ ಪಂದ್ಯವು ರಾತ್ರಿ 8:30 ಕ್ಕೆ ಪ್ರಾರಂಭವಾಗುತ್ತದೆ. ಇನ್ನು ಕೊನೆಯ ಪಂದ್ಯವು ರಾತ್ರಿ 9:30 ಕ್ಕೆ ಆರಂಭವಾಗಲಿದೆ.

ಈ ಬಾರಿ ಕಾದಾಟಕ್ಕೆ ಈಗಾಗಲೇ ಬಹುತೇಕ ತಂಡಗಳು ತಮ್ಮ ನಾಯಕರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಂತೆ ಪ್ರತಿ ತಂಡಗಳ ನಾಯಕರುಗಳ ಹೆಸರು ಹೀಗಿದೆ....

#1 ಬೆಂಗಾಲ್ ವಾರಿಯರ್ಸ್: ಮಣಿಂದರ್ ಸಿಂಗ್

#2 ದಬಾಂಗ್ ದೆಹಲಿ: ಜೋಗಿಂದರ್ ನರ್ವಾಲ್

#3 ಯುಪಿ ಯೋಧಾ: ನಿತೇಶ್ ಕುಮಾರ್

#4 ಯು ಮುಂಬಾ: ಫಾಝೆಲ್ ಅತ್ರಾಚಲಿ

#5 ಹರಿಯಾಣ ಸ್ಟೀಲರ್ಸ್: ಇನ್ನೂ ನಾಯಕನ ಘೋಷಿಸಿಲ್ಲ

#6 ಬೆಂಗಳೂರು ಬುಲ್ಸ್: ಪವನ್ ಕುಮಾರ್ ಶೆಹ್ರಾವತ್

#7 ಜೈಪುರ ಪಿಂಕ್ ಪ್ಯಾಂಥರ್ಸ್: ದೀಪಕ್ ಹೂಡಾ

#8 ಪಾಟ್ನಾ ಪೈರೇಟ್ಸ್ : ಪ್ರಶಾಂತ್ ಕುಮಾರ್ ರೈ

#9 ಗುಜರಾತ್ ಜೈಂಟ್ಸ್ : ಸುನಿಲ್ ಕುಮಾರ್

#10 ಪುಣೇರಿ ಪಲ್ಟನ್: ನಿತಿನ್ ತೋಮರ್

#11 ತೆಲುಗು ಟೈಟಾನ್ಸ್: ರೋಹಿತ್ ಕುಮಾರ್

#12 ತಮಿಳು ತಲೈವಾಸ್: ಸುರ್ಜೀತ್ ಸಿಂಗ್
Published On - 10:32 pm, Thu, 16 December 21