
ರಜನೀಕಾಂತ್ರ ಕಬಾಲಿ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳ ನಿರ್ಮಿಸಿರುವ ಕೆಪಿ ಚೌಧರಿಯನ್ನು ಡ್ರಗ್ಸ್ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯನಾಗಿದ್ದ ಕೆಪಿ ಚೌಧರಿ ಐಶಾರಾಮಿ ಜೀವನ ಶೈಲಿ ಹೊಂದಿದ್ದ

ಹಲವು ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೆಪಿ ಚೌಧರಿ ಸಿನಿಮಾ ಗೆಳೆಯರಿಗಾಗಿ ಪಾರ್ಟಿಗಳನ್ನು ಸಹ ಆಯೋಜನೆ ಮಾಡುತ್ತಿದ್ದ.

ಕೆಪಿ ಚೌಧರಿ, ನಟಿ, ಬಿಗ್ಬಾಸ್ ಮಾಜಿ ಸ್ಪರ್ಧಿ ಆಶು ರೆಡ್ಡಿ ಜೊತೆ ಆಪ್ತ ಗೆಳೆತನ ಹೊಂದಿದ್ದ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಆಶು ರೆಡ್ಡಿ ಮಾತ್ರವೇ ಅಲ್ಲದೆ ತೆಲುಗು ಚಿತ್ರರಂಗದ ಹಲವು ನಟ-ನಟಿಯರೊಟ್ಟಿಗೆ ಚೌಧರಿಗೆ ಆಪ್ತ ಗೆಳೆತನ ಇತ್ತು.

ಕೆಪಿ ಚೌಧರಿ ಸ್ವತಃ ಮಾದಕ ವಸ್ತು ಸೇವಿಸುತ್ತಿದ್ದು ಜೊತೆಗೆ ಸುಮಾರು 12 ಮಂದಿಗೆ ಮಾದಕ ವಸ್ತು ಮಾರಾಟ ಮಾಡಿರುವುದು ಪೊಲೀಸರ ತನಿಖೆಯಿಂದ ಹೊರಬಂದಿದೆ.