ಉಲನ್ ದಾರದಲ್ಲಿ ಅರಳಿದ ದಿ.ಪುನೀತ್ ರಾಜಕುಮಾರ್ ಕಲಾಕೃತಿ; ಇಲ್ಲಿದೆ ಝಲಕ್​

Edited By: ಕಿರಣ್ ಹನುಮಂತ್​ ಮಾದಾರ್

Updated on: Nov 28, 2023 | 4:29 PM

ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದ ಪುನೀತ್ ಅಭಿಮಾನಿಗಳು ಸೇರಿಕೊಂಡು ಐದು ಕಿಲೋ ಉಲನ್ ದಾರ ಬಳಸಿ, ಐದು ದಿನ ಸಮಯದಲ್ಲಿ ಬರೊಬ್ಬರಿ ಹದಿನೈದು ಅಡಿ ಎತ್ತರದ ಪುನೀತ್ ರಾಜಕುಮಾರ್​ ಅವರ ಕಲಾಕೃತಿಯನ್ನು ಬಿಡಿಸಿದ್ದಾರೆ.

1 / 6
 ಉಲನ್ ದಾರದಲ್ಲಿ ದಿ.ಪುನೀತ್ ರಾಜಕುಮಾರ್ ಅವರ ಕಲಾಕೃತಿ ಅರಳಿದ್ದು, ಈ ಮೂಲಕ ಅಭಿಮಾನಿಗಳು ಅಪ್ಪುವಿನ ಮೇಲಿಟ್ಟಿರುವ ಅಭಿಮಾನವನ್ನು ಮೆರೆದಿದ್ದಾರೆ.

ಉಲನ್ ದಾರದಲ್ಲಿ ದಿ.ಪುನೀತ್ ರಾಜಕುಮಾರ್ ಅವರ ಕಲಾಕೃತಿ ಅರಳಿದ್ದು, ಈ ಮೂಲಕ ಅಭಿಮಾನಿಗಳು ಅಪ್ಪುವಿನ ಮೇಲಿಟ್ಟಿರುವ ಅಭಿಮಾನವನ್ನು ಮೆರೆದಿದ್ದಾರೆ.

2 / 6

ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದ ಪುನೀತ್ ಅಭಿಮಾನಿಗಳು ಸೇರಿಕೊಂಡು ಈ ಕೈಚಳಕ ತೋರಿಸಿದ್ದು, ತಮ್ಮ ನೆಚ್ಚಿನ ನಟನ ಚಿತ್ರಣವನ್ನು ಉಲನ್​ ದಾರದಲ್ಲಿ ಬಿಡಿಸಿದ್ದಾರೆ.

3 / 6

ಇನ್ನು ಈ ಉಲನ್​ ದಾರದಿಂದ ಮಾಡಿದ ಕಲಾಕೃತಿಯನ್ನು ಕಾರಟಗಿ ಪಟ್ಟಣದಲ್ಲಿರುವ ಲಕ್ಷ್ಮಿ ಚಿತ್ರಮಂದಿರದ ಬಳಿ ಅಳವಡಿಸಲಾಗಿದೆ.

4 / 6

ಪುನೀತ್​ ರಾಜಕುಮಾರ್​ ಅಭಿಮಾನಿಗಳಾದ ಕಾರಟಗಿ ಪಟ್ಟಣದ ನಿವಾಸಿ ಗಿರಿ ಮತ್ತು ಸ್ನೇಹಿತರು ಸೇರಿಕೊಂಡು ಈ ‌ವಿಭಿನ್ನ ರೀತಿಯ ಕೈಚಳಕ ತೋರಿಸಿದ್ದಾರೆ.

5 / 6

ಐದು ಕಿಲೋ ಉಲನ್ ದಾರ ಬಳಸಿ, ಐದು ದಿನ ಸಮಯದಲ್ಲಿ ಈ ವಿಭಿನ್ನ ಕಲಾಕೃತಿ ನಿರ್ಮಾಣ ಮಾಡಿದ್ದು, ಬರೊಬ್ಬರಿ ಹದಿನೈದು ಅಡಿ ಎತ್ತರದ ಕಲಾಕೃತಿ ಇದಾಗಿದೆ.

6 / 6

ಪುನೀತ್ ರಾಜಕುಮಾರ್​ ಅವರ ಸ್ಮರಣೆಗಾಗಿ ಈ ಕಲಾಕೃತಿಯನ್ನು ಅಭಿಮಾನಿಗಳು ಸಿದ್ದಮಾಡಿದ್ದು, ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. 

ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Loading...
Unable to load recommendations.
Follow Us