
ನಟಿ ರಾಶಿ ಖನ್ನಾ ಅವರು ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಬ್ಯುಸಿ ಇದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2013ರ ‘ಮದ್ರಾಸ್ ಕೆಫೆ’ ಚಿತ್ರದ ಮೂಲಕ. ಅವರು ಸಿನಿಮಾ ರಂಗಕ್ಕೆ ಬಂದು 10 ವರ್ಷ ಕಳೆದಿದೆ.

ರಾಶಿ ಖನ್ನಾ ಅವರು ಸದ್ಯ ವೆಬ್ ಸೀರಿಸ್ ಲೋಕದಲ್ಲಿ ಮಿಂಚುತ್ತಿದ್ದಾರೆ. ಅವರು ಮುಟ್ಟಿದ್ದೆಲ್ಲ ಚಿನ್ನ ಆಗುತ್ತಿದೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಕಳೆದ ವರ್ಷ ರಿಲೀಸ್ ಆದ ‘ರುದ್ರ: ದಿ ಎಡ್ಜ್ ಆಫ್ ಡಾರ್ಕ್ನೆಸ್’ ಯಶಸ್ಸು ಕಂಡಿತು. ಈ ಸೀರಿಸ್ನಲ್ಲಿ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.

ಈ ವರ್ಷ ಅವರ ನಟನೆಯ ‘ಫರ್ಜಿ’ ವೆಬ್ ಸೀರಿಸ್ ರಿಲೀಸ್ ಆಗಿದೆ. ಆರ್ಬಿಐನಲ್ಲಿ ಕೆಲಸ ಮಾಡುವ ಯುವತಿ ಆಗಿ ಅವರು ಮಿಂಚಿದ್ದಾರೆ. ಪ್ರತಿ ವೆಬ್ ಸೀರಿಸ್ನಲ್ಲಿ ಅವರಿಗೆ ತೂಕದ ಪಾತ್ರದ ಸಿಗುತ್ತಿದೆ.

‘ಫರ್ಜಿ’ ಸಿನಿಮಾ ಖೋಟಾ ನೋಟು ದಂಧೆಯ ಮೇಲೆ ಕೇಂದ್ರೀಕೃತವಾಗಿದೆ. ಶಾಹಿದ್ ಕಪೂರ್ ಹಾಗೂ ವಿಜಯ್ ಸೇತುಪತಿ ಈ ಸೀರಿಸ್ನಲ್ಲಿ ಕಾಣಿಸಿಕೊಂಡಿದ್ದಾರೆ.