
‘ಲವ್ ಮಾಕ್ಟೇಲ್ 2’ ಚಿತ್ರದಲ್ಲಿ ಸಿಹಿ ಹೆಸರಿನ ಪಾತ್ರ ಮಾಡಿ ಗಮನ ಸೆಳೆದಿದ್ದ ರೇವಲ್ ಡೇವಿಡ್ ಅವರು ಈಗ ಮದುವೆ ಆಗಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಕ್ಟೋಬರ್ 26ರಂದು ಈ ವಿವಾಹ ನೆರವೇರಿದೆ. ಈ ಫೋಟೋಗಳನ್ನು ತಡವಾಗಿ ರೇಚಲ್ ಅವರು ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.

ರೇಚಲ್ ಅವರು ‘ಲವ್ ಮಾಕ್ಟೇಲ್ 2’ ಚಿತ್ರದಲ್ಲಿ ನಟಿಸಿದ್ದರು. ಹೀಗಾಗಿ, ಈ ಚಿತ್ರದಲ್ಲಿ ನಟಿಸಿದ್ದ ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್ ಅವರು ಕೂಡ ರೇಚಲ್ ಅವರಿಗೆ ಶುಭಾಶಯ ತಿಳಿಸಿದ್ದಾರೆ.

ರೇಚಲ್ ಅವರು ವಿವಾಹ ಆಗಿದ್ದು ಆ್ಯಂಟೋ ಫಿಲಿಪ್ ಎಂಬ ವ್ಯಕ್ತಿಯನ್ನು. ಅವರು ಉದ್ಯಮಿ. ವಿಶೇಷ ಎಂದರೆ ರೇಚಲ್ಗಿಂತ ಆ್ಯಂಟೋ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಹಿಂಬಾಲಕರ ಸಂಖ್ಯೆ ಹೆಚ್ಚಿದೆ.

ರೇಚಲ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2019ರಲ್ಲಿ. ಮಲಯಾಳಂ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಅವರು ಕಾಲಿಟ್ಟರು. ಈಗ ‘ಭುವನಂ ಗಗನಂ’ ಹೆಸರಿನ ಕನ್ನಡದ ಸಿನಿಮಾದಲ್ಲಿ ಅವರು ನಟಿಸುತ್ತಾ ಇದ್ದಾರೆ.