ಇಂದು (ಏಪ್ರಿಲ್ 2) ಹಿಂದೂಗಳ ವಿಶೇಷ ಹಬ್ಬ ಯುಗಾದಿಯನ್ನು ಆಚರಿಸಲಾಗಿದೆ. ಜನಸಾಮಾನ್ಯರಿಂದ ಹಿಡಿದು, ಸೆಲೆಬ್ರಿಟಿಗಳವರೆಗೆ ಎಲ್ಲರೂ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ರಾಧಿಕಾ ಪಂಡಿತ್ ಕೂಡ ಯುಗಾದಿ ಹಬ್ಬವನ್ನು ಕುಟುಂಬದವರ ಜತೆ ಆಚರಿಸಿಕೊಂಡಿದ್ದಾರೆ.
ಯಶ್ ಸದ್ಯ, ‘ಕೆಜಿಎಫ್ 2’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರು ತಂಡದ ಜತೆ ದೆಹಲಿಗೆ ತೆರಳಿದ್ದರು. ಹಬ್ಬದ ನಿಮಿತ್ತ ಇಂದು ಅವರು ಪ್ರಚಾರ ಕಾರ್ಯಕ್ಕೆ ಬ್ರೇಕ್ ಕೊಟ್ಟು, ಕುಟುಂಬದವರ ಜತೆ ಸಮಯ ಕಳೆದಿದ್ದಾರೆ.
ರಾಧಿಕಾ ಪಂಡಿತ್ ಅವರು ಪತಿ ಯಶ್, ಮಕ್ಕಳಾದ ಆಯ್ರಾ ಹಾಗೂ ಯಥರ್ವ್ ಜತೆ ಹೋಳಿಗೆ ಊಟ ಸವಿದಿದ್ದಾರೆ. ಈ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದರ ಜತೆಗೆ, ತಮ್ಮ ಅಭಿಮಾನಿಗಳಿಗೆ ರಾಧಿಕಾ ಪಂಡಿತ್ ಯುಗಾದಿ ಶುಭಾಶಯ ತಿಳಿಸಿದ್ದಾರೆ. ಅಭಿಮಾನಿಗಳು ಕಮೆಂಟ್ ಬಾಕ್ಸ್ನಲ್ಲಿ ನಟಿಗೆ ಯುಗಾದಿ ಶುಭಾಶಯ ಹೇಳಿದ್ದಾರೆ.
ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕುಟುಂಬದ ಜತೆ ಕಳೆಯುವ ಸಮಯವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.
Published On - 7:31 pm, Sat, 2 April 22