Updated on: Apr 27, 2023 | 8:34 AM
ನಟಿ ರಾಧಿಕಾ ಪಂಡಿತ್ ಅವರು ನಟನೆಯಿಂದ ಬ್ರೇಕ್ ಪಡೆದಿದ್ದಾರೆ. ಆದರೆ, ಅಭಿಮಾನಿಗಳಿಗೋಸ್ಕರ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.
ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿಗೆ ಆಯ್ರಾ ಹಾಗೂ ಯಥರ್ವ್ ಹೆಸರಿನ ಮಕ್ಕಳಿದ್ದಾರೆ. ರಾಧಿಕಾ ಪಂಡಿತ್ ಆಗಾಗ ಮಕ್ಕಳ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.
ಈಗ ರಾಧಿಕಾ ಪಂಡಿತ್ ಅವರು ಇನ್ಸ್ಟಾಗ್ರಾಮ್ನಲ್ಲಿ ಆಯ್ರಾ ಹಾಗೂ ಯಥರ್ವ್ ಜೊತೆ ಇರುವು ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಫ್ಯಾನ್ಸ್ಗೆ ಇಷ್ಟ ಆಗಿದೆ.
ಸ್ವಿಮ್ಮಿಂಗ್ ಪೂಲ್ ಬಳಿ ಮಕ್ಕಳ ಜೊತೆ ರಾಧಿಕಾ ಪಂಡಿತ್ ನಿಂತಿದ್ದಾರೆ. ಆಯ್ರಾ ಹಾಗೂ ಯಥರ್ವ್ ಖುಷಿಯ ಮೂಡ್ನಲ್ಲಿ ಇದ್ದಾರೆ.
ಮದುವೆ ಆದ ಬಳಿಕ ರಾಧಿಕಾ ಪಂಡಿತ್ ನಟನೆಯಲ್ಲಿ ಅಷ್ಟು ತೊಡಗಿಕೊಂಡಿಲ್ಲ. ಅವರು ಮರಳಿ ಚಿತ್ರರಂಗಕ್ಕೆ ಬರಬೇಕು ಎಂಬುದು ಫ್ಯಾನ್ಸ್ ಕೋರಿಕೆ. ಸದ್ಯ ಮಕ್ಕಳ ಆರೈಕೆಯಲ್ಲಿ ರಾಧಿಕಾ ಬ್ಯುಸಿ ಇದ್ದಾರೆ.