
ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗಾಗಿ ಅವರು ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರ ಹೊಸ ಫೋಟೋಗಳು ಗಮನ ಸೆಳೆದಿವೆ.

ರಾಧಿಕಾ ಪಂಡಿತ್ ಅವರು ಸುತ್ತಾಟಕ್ಕೆ ತೆರಳಿದ್ದಾರೆ. ದೋಣಿಯಲ್ಲಿ ಅವರು ಮಕ್ಕಳ ಜೊತೆ ಸುತ್ತಾಟ ಮಾಡಿದ್ದಾರೆ. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

ರಾಧಿಕಾ ಪಂಡಿತ್ ಅವರು ಮಕ್ಕಳಿಗೆ ಪ್ರಕೃತಿಯ ಪರಿಚಯ ಮಾಡಿಸಿದ್ದಾರೆ. ಈ ಫೋಟೋಗಳು ಫ್ಯಾನ್ಸ್ಗೆ ಇಷ್ಟ ಆಗಿದೆ. ಇದಕ್ಕೆ ನಾನಾ ರೀತಿಯ ಕಮೆಂಟ್ಗಳು ಬರುತ್ತಿವೆ.

ರಾಧಿಕಾ ಪಂಡಿತ್ ಅವರ ತಂದೆ-ತಾಯಿ ಕೂಡ ಈ ಟ್ರಿಪ್ನಲ್ಲಿ ಇದ್ದರು. ಆದರೆ, ಯಶ್ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಿದ್ದರಿಂದ ಅವರಿಗೆ ಬರೋಕೆ ಸಾಧ್ಯವಾಗಿಲ್ಲ.

ರಾಧಿಕಾ ಪಂಡಿತ್ ಅವರು ಇನ್ನೂ ಯಂಗ್ ಆಗಿ ಕಾಣಿಸಿದ್ದಾರೆ. ಈ ಬಗ್ಗೆ ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ‘ರಾಧಿಕಾ ಪಂಡಿತ್ಗೆ ವಯಸ್ಸೇ ಆಗುತ್ತಿಲ್ಲ’ ಎಂದು ಕೆಲವರು ಬರೆದುಕೊಂಡಿದ್ದಾರೆ.

ರಾಧಿಕಾ ಪಂಡಿತ್ ಅವರು ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಮದುವೆ ಆದ ಬಳಿಕ ಅವರು ಒಪ್ಪಿಕೊಂಡಿದ್ದು ಒಂದೇ ಒಂದು ಸಿನಿಮಾ. ಅವರು ನಟನೆಗೆ ಕಂಬ್ಯಾಕ್ ಮಾಡೋದು ಸದ್ಯಕ್ಕಂತೂ ಅನುಮಾನವೇ.