ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾಗೆ ಇಂದು ಹುಟ್ಟುಹಬ್ಬದ ಸಂಭ್ರಮ.
ಡಿ. 2, 2018ರಂದು ಐರಾ ಜನಿಸಿದ್ದು, ನಾಲ್ಕು ವರ್ಷ ತುಂಬಿ ಐದನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ.
ನಟಿ ರಾಧಿಕಾ ಪಂಡಿತ್ ಮಗಳು ಐರಾ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, 'ನನ್ನ ಮುದ್ದು ರಾಜಕುಮಾರಿಗೆ ಹುಟ್ಟುಹಬ್ಬದ ಶುಭಾಯಶಗಳು' ಎಂದು ವಿಶ್ ಮಾಡಿದ್ದಾರೆ.
ಐರಾ ನೋಡುವುದಕ್ಕೆ ತಂದೆ ಯಶ್ ತರಹ ಇದ್ಧಾಳೆಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ರಾಧಿಕಾ ಪಂಡಿತ್ ಅವರು ಹೆಚ್ಚು ತಮ್ಮ ಮಕ್ಕಳ ಜೊತೆ ಕಾಲ ಕಳೆಯುತ್ತಾರೆ. ಜೊತೆಗೆ ವಿಡಿಯೋ, ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
Published On - 11:10 pm, Fri, 2 December 22