ಶೂಟಿಂಗ್ ಮುಗಿಸಿದ ‘ಬಿಂಗೊ’; ಇದು ಆರ್.ಕೆ. ಚಂದನ್-ರಾಗಿಣಿ ದ್ವಿವೇದಿ ಜೋಡಿಯ ಸಿನಿಮಾ
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಬಿಂಗೊ’ ಸಿನಿಮಾಗೆ ಬೆಂಗಳೂರಿನಲ್ಲೇ ಪೂರ್ತಿ ಶೂಟಿಂಗ್ ಮಾಡಲಾಗಿದೆ. ಯಶಸ್ವಿಯಾಗಿ ಚಿತ್ರೀಕರಣ ಮುಗಿದಿದ್ದು, ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಟ್ರೇಲರ್ ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ.