ಶೂಟಿಂಗ್​ ಮುಗಿಸಿದ ‘ಬಿಂಗೊ’; ಇದು ಆರ್.ಕೆ. ಚಂದನ್-ರಾಗಿಣಿ ದ್ವಿವೇದಿ ಜೋಡಿಯ ಸಿನಿಮಾ

Updated on: Jan 11, 2024 | 5:34 PM

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಬಿಂಗೊ’ ಸಿನಿಮಾಗೆ ಬೆಂಗಳೂರಿನಲ್ಲೇ ಪೂರ್ತಿ ಶೂಟಿಂಗ್​ ಮಾಡಲಾಗಿದೆ. ಯಶಸ್ವಿಯಾಗಿ ಚಿತ್ರೀಕರಣ ಮುಗಿದಿದ್ದು, ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಟ್ರೇಲರ್​ ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ.

1 / 7
ನಟಿ ರಾಗಿಣಿ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಪೈಕಿ ‘ಬಿಂಗೊ’ ಚಿತ್ರ ಕೂಡ ಇದೆ. ಈ ಸಿನಿಮಾಗೆ ಶಂಕರ್ ಕೋನಮಾನಹಳ್ಳಿ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ‘ಶಂಭೋ ಶಿವ ಶಂಕರ’ ಚಿತ್ರಕ್ಕೆ ಶಂಕರ್​ ಕೋನಮಾನಹಳ್ಳಿ ನಿರ್ದೇಶನ ಮಾಡಿದ್ದರು.

ನಟಿ ರಾಗಿಣಿ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಪೈಕಿ ‘ಬಿಂಗೊ’ ಚಿತ್ರ ಕೂಡ ಇದೆ. ಈ ಸಿನಿಮಾಗೆ ಶಂಕರ್ ಕೋನಮಾನಹಳ್ಳಿ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ‘ಶಂಭೋ ಶಿವ ಶಂಕರ’ ಚಿತ್ರಕ್ಕೆ ಶಂಕರ್​ ಕೋನಮಾನಹಳ್ಳಿ ನಿರ್ದೇಶನ ಮಾಡಿದ್ದರು.

2 / 7

‘ಬಿಂಗೊ’ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡುತ್ತಿರುವ ಆರ್.ಕೆ. ಚಂದನ್ ಅವರಿಗೆ ‘ತುಪ್ಪದ ಬೆಡಗಿ’ ರಾಗಿಣಿ ದ್ವಿವೇದಿ ಅವರು ಜೋಡಿಯಾಗಿ ನಟಿಸುತ್ತಿದ್ದಾರೆ. ಈಗ ಈ ಸಿನಿಮಾದ ಚಿತ್ರೀಕರಣ ಮುಕ್ತಾಯ ಆಗಿದೆ ಎಂಬ ಸುದ್ದಿಯನ್ನು ಚಿತ್ರತಂಡ ಹಂಚಿಕೊಂಡಿದೆ.

3 / 7

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಬಿಂಗೊ’ ಸಿನಿಮಾಗೆ ಬೆಂಗಳೂರಿನಲ್ಲೇ ಶೂಟಿಂಗ್​ ಮಾಡಲಾಗಿದೆ. ಯಶಸ್ವಿಯಾಗಿ ಚಿತ್ರೀಕರಣ ಮುಗಿದಿದ್ದು, ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಈ ಚಿತ್ರದ ಟೈಟಲ್​ ಡಿಫರೆಂಟ್​ ಆಗಿದೆ.

4 / 7

‘ಆರ್.ಕೆ. ಸ್ಟುಡಿಯೋಸ್’ ಹಾಗೂ ‘ಮುತರಾ ವೆಂಚರ್ಸ್’ ಲಾಂಛನದಲ್ಲಿ ‘ಬಿಂಗೊ’ ಸಿನಿಮಾ ಮೂಡಿಬರುತ್ತಿದೆ. ಲಲಿತಾಸ್ವಾಮಿ ಹಾಗೂ ಆರ್. ಪರಾಂಕುಶ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮೇಕಿಂಗ್​ ಸ್ಟಿಲ್ಸ್​ ಲಭ್ಯವಾಗಿವೆ.

5 / 7

‘ಬಿಂಗೋ’ ಸಿನಿಮಾದ ಪಾತ್ರವರ್ಗದಲ್ಲಿ ಆರ್.ಕೆ. ಚಂದನ್, ರಾಗಿಣಿ ದ್ವಿವೇದಿ, ರಾಜೇಶ್ ನಟರಂಗ, ಮುರಳಿ ಪೂರ್ವಿಕ್, ‘ಮಜಾ ಟಾಕೀಸ್’ ಪವನ್, ಶ್ರವಣ್, ಅಪೂರ್ವ ಮುಂತಾದ ಕಲಾವಿದರು ಇದ್ದಾರೆ. ಟ್ರೇಲರ್​ ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ.

6 / 7

ಈ ಸಿನಿಮಾಗೆ ಹಿತನ್ ಹಾಸನ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಅವರ ಸಂಗೀತ ಸಂಯೋಜನೆಯಲ್ಲಿ ಮೂರು ಹಾಡುಗಳು ಸುಮಧುರವಾಗಿ ಮೂಡಿಬಂದಿವೆ ಎಂದು ‘ಬಿಂಗೊ’ ತಂಡ ಹೇಳಿದೆ. ಶೀಘ್ರದಲ್ಲೇ ಹಾಡುಗಳು ಬಿಡುಗಡೆ ಆಗಲಿವೆ.

7 / 7

ನಟರಾಜ್ ಮುದ್ದಾಲ್ ಅವರ ಛಾಯಾಗ್ರಹಣ ‘ಬಿಂಗೊ’ ಸಿನಿಮಾಗೆ ಇದೆ. ಈ ಚಿತ್ರದಲ್ಲಿನ ಆ್ಯಕ್ಷನ್​ ದೃಶ್ಯಗಳಿಗೆ ನರಸಿಂಹ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಕಂಬಿ ರಾಜು ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ವೆಂಕಿ ಅವರು ಸಂಕಲನ ಮಾಡುತ್ತಿದ್ದಾರೆ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us