
ದೆಹಲಿಯಲ್ಲಿ ನಾಯಿ ಕಡಿತದಿಂದ ರೇಬೀಸ್‌ಗೆ 6 ವರ್ಷದ ಬಾಲಕಿ ಚಾವಿ ಶರ್ಮಾ ನಿಧನ ಹೊಂದಿದ್ದಳು. ಈ ಬೆನ್ನಲ್ಲೇ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. 8 ವಾರಗಳೊಳಗೆ ಪ್ರತಿಯೊಂದು ಬೀದಿ ನಾಯಿಯನ್ನು ಒಟ್ಟುಗೂಡಿಸಿ, ಗೊತ್ತುಪಡಿಸಿದ ನಾಯಿಗಳ ಆಶ್ರಯತಾಣಗಳಿಗೆ ಸ್ಥಳಾಂತರಿಸಬೇಕೆಂದು ನಿರ್ದೇಶಿಸಿದೆ.

ಈ ಆದೇಶದ ಬೆನ್ನಲ್ಲೇ ರಾಜ್ ಬಿ. ಶೆಟ್ಟಿ ಅವರು ಪೋಸ್ಟ್ ಒಂದನ್ನು ಹಾಕಿದ್ದಾರೆ. ರಾಜ್ ಅವರು ಪ್ರಾಣಿ ಪ್ರಿಯರು. ಅವರಿಗೆ ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಇದೆ. ಈ ಕಾರಣಕ್ಕೆ ಸುಪ್ರೀಂಕೋರ್ಟ್ ಈ ಆದೇಶವನ್ನು ಸರಿ ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

‘ಶ್ವಾನಗಳ ಜೊತೆ ಇರುವ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ರಾಜ್, ಇವು ನನಗೆ ನೆಮ್ಮದಿ ನೀಡುವ ಜೀವಿಗಳು. ನನಗೆ ಮಾತ್ರವಲ್ಲ ನನ್ನಂತಹ ಅದೆಷ್ಟೋ ಅಸಂಖ್ಯ ಜನರಿಗೆ ಇವು ನೋವನ್ನು ಗುಣಪಡಿಸುವ ಶಕ್ತಿ ಹೊಂದಿವೆ’ ಎಂದು ರಾಜ್ ಬರೆದಿದ್ದಾರೆ.

‘ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಸುಪ್ರೀಂಕೋರ್ಟ್ ಈ ಆದೇಶವನ್ನು ಬದಲಾಯಿಸುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ರಾಜ್ ಬರೆದುಕೊಂಡಿದ್ದಾರೆ. ಇದರ ಜೊತೆಗೆ ರಾಜ್ ಅವರು ವಿಶೇಷ ಮನವಿ ಒಂದನ್ನು ಇಟ್ಟಿದ್ದಾರೆ.

‘ನಾನು 7 ಬೀದಿ ನಾಯಿಗಳನ್ನು ಸಾಕಿದ್ದೇನೆ. ಸಮಾಜ ಜವಾಬ್ದಾರಿ ತೆಗೆದುಕೊಂಡಾಗ, ಈ ರೀತಿಯ ಕಠಿಣ ಪರಿಹಾರಗಳು ಅಗತ್ಯವಿಲ್ಲ’ ಎಂದಿದ್ದಾರೆ ರಾಜ್. ಈ ಮೂಲಕ ಮೂಕ ಪ್ರಾಣಿಗಳನ್ನು ದತ್ತು ಪಡೆದು ಸಾಕಲು ಕೋರಿದ್ದಾರೆ.
Published On - 10:51 am, Wed, 13 August 25