ಬಿಗ್ ಬಾಸ್ನಲ್ಲಿ ಹೇಗಿದೆ ನೋಡಿ ರಜತ್ ಹೊಸ ಲುಕ್; ಫೋಟೋ ವೈರಲ್
ರಜತ್ ಅವರು ದಿಟ್ಟ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ. ಅವರು ತಲೆ ಬೋಳಿಸಿಕೊಳ್ಳೋ ಚಾಲೆಂಜ್ನ ಸ್ವೀಕರಿಸಿದ್ದಾರೆ. ಹೌದು, ಬಿಗ್ ಬಾಸ್ ಮನೆಯಲ್ಲಿ ರಜತ್ ತಲೆ ಬೋಳಿಸಿಕೊಂಡಿದ್ದು ಫೋಟೋ ವೈರಲ್ ಆಗಿದೆ.
1 / 5
ಬಿಗ್ ಬಾಸ್ ಮನೆಯಲ್ಲಿ ರಜತ್ ಅವರು ಸಖತ್ ಹೈಲೈಟ್ ಆಗಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರು ನಡೆದುಕೊಳ್ಳುತ್ತಿರುವ ರೀತಿ. ಅವರು ಬಂದಾಗಿನಿಂದಲೂ ಸಖತ್ ರಗಡ್ ಆಗಿ ಆಟ ಪ್ರದರ್ಶನ ಮಾಡುತ್ತಾ ಬಂದಿದ್ದಾರೆ. ಇದಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.
2 / 5
ಈಗ ರಜತ್ ಅವರು ದಿಟ್ಟ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ. ಅವರು ತಲೆ ಬೋಳಿಸಿಕೊಳ್ಳೋ ಚಾಲೆಂಜ್ನ ಸ್ವೀಕರಿಸಿದ್ದಾರೆ. ಹೌದು, ಬಿಗ್ ಬಾಸ್ ಮನೆಯಲ್ಲಿ ರಜತ್ ತಲೆ ಬೋಳಿಸಿಕೊಂಡಿದ್ದು ಫೋಟೋ ವೈರಲ್ ಆಗಿದೆ.
3 / 5
ಬಿಗ್ ಬಾಸ್ ಮನೆಯಲ್ಲಿ ಎರಡು ತಂಡಗಳನ್ನಾಗಿ ಮಾಡಲಾಗಿದೆ. ಪ್ರತಿ ತಂಡದವರು ಎದುರಾಳಿ ತಂಡಕ್ಕೆ ಒಂದು ಚಾಲೆಂಜ್ ನೀಡಬೇಕು. ಈ ಚಾಲೆಂಜ್ನ ಸ್ವೀಕರಿಸಿ, ಅದನ್ನು ಮಾಡಿದರೆ ತಂಡ ಗೆದ್ದಂತೆ. ಈ ಪ್ರಕ್ರಿಯೆಯಲ್ಲಿ ನಾನಾ ರೀತಿಯ ಚಾಲೆಂಜ್ನ ನೀಡಲಾಗಿದೆ.
4 / 5
ಅದರಲ್ಲಿ ರಜತ್ಗೆ ನೀಡಿದ ಚಾಲೆಂಜ್ ಕೂಡ ಒಂದು. ಒಂದು ವ್ಯಕ್ತಿ ಸುಂದರವಾಗಿ ಕಾಣಲು ತಲೆ ಕೂದಲು ತುಂಬಾನೇ ಮುಖ್ಯ. ಆದರೆ, ಈ ತಲೆಕೂದಲನ್ನೇ ಬೋಳಿಸಿಕೊಳ್ಳಲು ಹೇಳಿದರೆ? ಹೀಗೊಂದು ಚಾಲೆಂಜ್ನ ರಜತ್ ಅವರಿಗೆ ನೀಡಲಾಗಿದೆ.
5 / 5
ಇದಕ್ಕೆ ಹಿಂದೆ ಮುಂದೆ ಯೋಚಿಸದೆ ರಜತ್ ಒಪ್ಪಿಕೊಂಡಿದ್ದಾರೆ. ರಜತ್ ಅವರ ತಲೆಯನ್ನು ಮಂಜು ಅವರು ಟ್ರಿಮ್ಮರ್ ಮೂಲಕ ಬೋಳಿಸಿದರು. ಅವರ ಹೊಸ ಲುಕ್ ವೈರಲ್ ಆಗಿದೆ.