‘ಅಮೃತವರ್ಷಿಣಿ’ ರಜಿನಿ ವಿವಾಹ; ಇಲ್ಲಿದೆ ಸುಂದರ ಫೋಟೋಗಳು

Updated on: Nov 10, 2025 | 1:34 PM

‘ಅಮೃತವರ್ಷಿಣಿ’ ಧಾರಾವಾಹಿಯ ರಜಿನಿ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರು. ಅವರು ಈಗ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಅರುಣ್ ಅವರ ಜೊತೆ ವಿವಾಹ ಆಗಿದ್ದಾರೆ. ಆಪ್ತರು ಬಂದು ಅವರಿಗೆ ಹಾರೈಸಿದ್ದಾರೆ. ಆ ಸಂದರ್ಭದ ಫೋಟೋಗಳು ಇಲ್ಲಿವೆ. ಈ ದಂಪತಿಗೆ ಸದ್ಯ ಎಲ್ಲರೂ ಶುಭ ಹಾರೈಸುತ್ತಿದ್ದಾರೆ.

1 / 5
‘ಅಮೃತವರ್ಷಿಣಿ’ ಧಾರಾವಾಹಿಯ ನಟಿ ರಜಿನಿ ಅವರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಿಮ್ ಟ್ರೇನರ್ ಅರುಣ್ ವೆಂಕಟೇಶ್ ಜೊತೆ ವಿವಾಹ ಆಗಿದ್ದಾರೆ. ಇಂದು (ನವೆಂಬರ್ 10) ಈ ಮದುವೆ ನಡೆದಿದೆ. ನವ ದಂಪತಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.

2 / 5
ಅರುಣ್ ಹಾಗೂ ರಜಿನಿ ಮಧ್ಯೆ ತುಂಬಾನೇ ಹಳೆಯ ಪರಿಚಯ ಇದೆ. ಇವರು ಕಳೆದ ಎರಡು ವರ್ಷಗಳಿಂದ ಒಟ್ಟಾಗಿ ರೀಲ್ಸ್ ಮಾಡುತ್ತಿದ್ದರು. ಅವರ ರೀಲ್ಸ್​ಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದವು.

3 / 5
ಈ ಮೊದಲು ‘ನಿಮ್ಮಿಬ್ಬರ ಮಧ್ಯೆ ಪ್ರೀತಿ ಇದೆಯೇ’ ಎಂದು ಕೇಳಿದಾಗ ರಜಿನಿ ಅವರು ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದರು. ‘ನಾವಿಬ್ಬರೂ ಫ್ರೆಂಡ್ಸ್ ಅಷ್ಟೇ. ಗೆಳೆಯರನ್ನೇ ಮದುವೆ ಆದರೂ ಬೆಸ್ಟ್. ಅವರಿಗೆ ನಮ್ಮ ಕಷ್ಟ ಸುಖ ಗೊತ್ತಿರುತ್ತದೆ’ ಎಂದು ರಜಿನಿ ಹೇಳಿದ್ದರು.

4 / 5
ಇಂದು ನಡೆದ ಮದುವೆಯಲ್ಲಿ ಆಪ್ತರು, ಗೆಳೆಯರು, ಕುಟುಂಬದವರು ಹಾಜರಿ ಹಾಕಿದ್ದರು. ಅರುಣ್ ಹಾಗೂ ರಜಿನಿ ವಿವಾಹದ ಫೋಟೋಗಳನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಫೋಟೋಗಳು ಗಮನ ಸೆಳೆಯುವ ರೀತಿಯಲ್ಲಿ ಇದೆ.

5 / 5
ರಜಿನಿ ಹಾಗೂ ಅರುಣ್ ಅವರದ್ದು ಪ್ರೇಮ ವಿವಾಹ. ಮನೆಯವರ ಒಪ್ಪಿಗೆ ಪಡೆದ ಬಳಿಕವೇ ಮದುವೆ ಆಗಿದ್ದಾರೆ. ರಜಿನಿ ಕೆಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅರುಣ್ ಅವರು, ಜಿಮ್ ಟ್ರೇನರ್ ಆಗಿದ್ದಾರೆ. ಇವರು ಇನ್ನಷ್ಟೇ ತಮ್ಮ ಲವ್​​ಸ್ಟೋರಿ ರಿವೀಲ್ ಮಾಡಬೇಕಿದೆ.