
ಶಿವರಾಜ್ ಕುಮಾರ್, ರಜನೀಕಾಂತ್, ಮೋಹನ್ಲಾಲ್, ಜಾಕಿ ಶ್ರಾಫ್ ಒಟ್ಟಿಗೆ ನಟಿಸಿರುವ ಜೈಲರ್ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ.

ಮೋಹನ್ಲಾಲ್ ಪಾತ್ರವೂ ಗಮನ ಸೆಳೆಯುತ್ತಿದ್ದು, ಜಾಕಿ ಶ್ರಾಫ್ ಈ ಸಿನಿಮಾದ ವಿಲನ್ ಆಗಿರಬಹುದಾ ಎಂಬ ಅನುಮಾನವನ್ನು ಅವರ ಲುಕ್ ಹುಟ್ಟಿಸುತ್ತಿದೆ.

ಸಿನಿಮಾದ ಪ್ರೋಮೋ ಇಂದು ಬಿಡುಗಡೆ ಆಗಿದ್ದು, ಪ್ರೋಮೋನಲ್ಲಿ ಶಿವರಾಜ್ ಕುಮಾರ್, ಶಿವರಾಜ್ ಕುಮಾರ್, ರಜನೀಕಾಂತ್, ಮೋಹನ್ಲಾಲ್, ಜಾಕಿ ಶ್ರಾಫ್ ಅವರ ಪಾತ್ರಗಳ ಲುಕ್ ಸಹ ನೀಡಲಾಗಿದೆ.

ಮಫ್ತಿ ಸಿನಿಮಾದ ಪಾತ್ರದ ರೀತಿಯಲ್ಲಿಯೇ ಖಡಕ್ ಆಗಿ ಶಿವಣ್ಣ, ಜೈಲರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ರಜನೀಕಾಂತ್ ಮುಖ್ಯ ಪಾತ್ರದಲ್ಲಿ ನಟಿಸಿ ನೆಲ್ಸನ್ ನಿರ್ದೇಶಿಸಿರುವ ಜೈಲರ್ ಸಿನಿಮಾವು ಆಗಸ್ಟ್ 10 ರಂದು ಬಿಡುಗಡೆ ಆಗಲಿದೆ.
Published On - 10:24 pm, Thu, 4 May 23