
ದಾವಣಗೆರೆ ನಗರದ ಬಾಪೂಜಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಯಲ್ಲೂ ಸಹ ರಾಮ ಮಂದಿರ ಉದ್ಘಾಟನೆ ಸಂಭ್ರಮ ಕಳೆಗಟ್ಟಿದೆ.

ದಾವಣಗೆರೆಯ ರೋಹಿತ್, ಅರ್ಪಿತಾ ಜೋಡಿ ಶ್ರೀ ರಾಮಮಂದಿರ ಉದ್ಘಾಟನೆ ದಿನವೇ ದಾಂಪತ್ಯಕ್ಕೆ ಕಾಲಿಟ್ಟಿದ್ದಕ್ಕೆ ಫುಲ್ ಖುಷ್ ಆಗಿದ್ದಾರೆ.

ಇಂದು ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮದುವೆ ಮಂಟಪದಲ್ಲೂ ಸಹ ರಾಮನ ಫೋಟೋ ಇಟ್ಟು ಪೂಜೆ ಮಾಡಲಾಯ್ತು

ರಾಮನ ಕಟೌಟ್ ಇರಿಸಿ ಪುಷ್ಪ ನಮನ ಸಲ್ಲಿಸಿದ ನವ ಜೋಡಿ, ಬಳಿಕ ಅತಿಥಿಗಳೊಂದಿಗೆ ಜೈ ಶ್ರೀ ರಾಮ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು.

ರಾಮ ಮಂದಿರ ಉದ್ಘಾಟನೆ ದಿನವೇ ಹೆರಿಗೆ ಮಾಡಿಸಿಕೊಳ್ಳಿ ಎಂದು ಗರ್ಭಿಣಿ ಸ್ತ್ರೀಯರು ವೈದ್ಯರ ದುಂಬಾಲು ಬಿದ್ದಿದ್ದರು. ಇಲ್ಲಿ ಇಂದೇ ಮದುವೆ ಇರುವುದಕ್ಕೆ ನವ ಜೋಡಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಮದುವೆ ಸ್ಟೇಜ್ ಹಿಂಭಾಗದಲ್ಲೇ ಶ್ರೀರಾಮನ ಕಟೌಟ್ ಇಟ್ಟು ಶುಭ ಹಾರೈಸಲು ಬಂದ ಅತಿಥಿಗಳ ಜೊತೆ ಫೋಟೋಗೆ ಫೋಸ್ ನೀಡಿದ್ದಾರೆ.

ಒಟ್ಟಾರೆಯಾಗಿ ರಾಜ್ಯದ ದೇವಸ್ಥಾನ, ಮನೆಗಳಲ್ಲಿ ಶ್ರೀರಾಮನ ಜಪ ಮಾಡಿದ್ರೆ, ಇಲ್ಲಿ ಮದುವೆ ಮಂಟಪದಲ್ಲೂ ಶ್ರೀರಾಮನ ಜಪ ಮಾಡಿರುವುದು ವಿಶೇಷವಾಗಿತ್ತು.