- Kannada News Photo gallery Ram Temple: As the Sun Shines Over Ayodhya, the Temple City Turns Radiant Before the Flag Hoisting Ceremony
Ayodhya Ram Mandir: ಧ್ವಜಾರೋಹಣಕ್ಕೂ ಮುನ್ನ ಅಯೋಧ್ಯೆಯ ರಾಮ ಮಂದಿರ ಕಂಡಿದ್ದು ಹೀಗೆ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿ ಸಂಪೂರ್ಣಗೊಂಡಿದ್ದು, ಇಂದು ಧ್ವಜಾರೋಹಣಕ್ಕೆ ಸಜ್ಜುಗೊಂಡಿದೆ. ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಗರವು ಭಕ್ತರಿಂದ ತುಂಬಿದೆ. ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ರಾಮಮಂದಿರ ನಿರ್ಮಾಣದೊಂದಿಗೆ ಅಯೋಧ್ಯೆ ನಗರವು ಅಭೂತಪೂರ್ವ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ರಾಮಪಥ ಮತ್ತು ಭಕ್ತಿಪಥದಂತಹ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಆಧುನಿಕ ಸ್ಪರ್ಶದೊಂದಿಗೆ ವಿಸ್ತರಿಸಲಾಗಿದೆ.
Updated on: Nov 25, 2025 | 11:20 AM

ಅಯೋಧ್ಯೆಯ ಮೂಲೆ ಮೂಲೆಯಲ್ಲೂ ರಾಮನಧ್ಯಾನ, ಬೆಳ್ಳಂಬೆಳಗ್ಗೆ ಸೂರ್ಯನ ಕಿರಣಗಳು ದೇವಾಲಯವನ್ನು ಸೋಕಿದ್ದವು. ಇದು ತುಂಬಾ ಆಕರ್ಷಕವಾಗಿತ್ತು. ನವೆಂಬರ್ 25 ರಂದು ಅಭಿಜಿತ್ ಮುಹೂರ್ತದ ಶುಭ ಸಮಯದಲ್ಲಿ ರಾಮ ದೇವಾಲಯದಲ್ಲಿ ಧರ್ಮ ಧ್ವಜ ಹಾರಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮಕ್ಕಾಗಿ ನಗರದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿದ್ದಾರೆ. ಜೈ ಶ್ರೀ ರಾಮ್ ಘೋಷಣೆಗಳು ಎಲ್ಲೆಡೆ ಪ್ರತಿಧ್ವನಿಸುತ್ತಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬೆಳಗ್ಗೆ 10 ಗಂಟೆಗೆ ಸಪ್ತಮಂದಿರ, ವಶಿಷ್ಠ, ವಿಶ್ವಾಮಿತ್ರ, ವಾಲ್ಮೀಕಿ, ನಿಷಾದರಾಜ್ ಗುಹಾ, ಮಾತಾ ಶಬರಿ ಮತ್ತು ಶೇಷಾವತಾರ ದೇವಸ್ಥಾನಗಳಿಗೆ ಭೇಟಿ ನೀಡಿದ್ದು 11 ಗಂಟೆಗೆ ಮಾತಾ ಅನ್ನಪೂರ್ಣ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ಅಯೋಧ್ಯೆಯಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಟಿಎಸ್ ಕಮಾಂಡೋಗಳು, ಎನ್‌ಎಸ್‌ಜಿ ಸ್ನೈಪರ್‌ಗಳು, ಸೈಬರ್ ತಂಡಗಳು ಮತ್ತು ತಾಂತ್ರಿಕ ತಜ್ಞರು ಸೇರಿದಂತೆ ಸುಮಾರು 6,970 ಸಿಬ್ಬಂದಿಯನ್ನು ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.

ಅಯೋಧ್ಯೆಯ ರಾಮ ಮಂದಿರದಲ್ಲಿ ಧ್ವಜಾರೋಹಣ ಸಮಾರಂಭವು ನವೆಂಬರ್ 25, 2025 ರಂದು ವಿವಾಹ ಪಂಚಮಿಯಂದು ನಿಗದಿಯಾಗಿದೆ. ಅಭಿಜಿತ್ ಮುಹೂರ್ತವನ್ನು ಈ ಸಮಾರಂಭಕ್ಕೆ ಆಯ್ಕೆ ಮಾಡಲಾಗಿದೆ, ಕಾರ್ಯಕ್ರಮಗಳು ಬೆಳಗ್ಗೆ 11.45 ರಿಂದ ಮಧ್ಯಾಹ್ನ 12:29 ರವರೆಗೆ ನಡೆಯಲಿದೆ.

ಪ್ರಧಾನಿ ಮೋದಿ ಅವರು ಮಧ್ಯಾಹ್ನ 12 ಗಂಟೆ ಸುಮಾರಿಗೆ ಶ್ರೀ ರಾಮ ಜನ್ಮಭೂಮಿ ದೇವಾಲಯದ ಮೇಲ್ಭಾಗದಲ್ಲಿ ಧರ್ಮ ಧ್ವಜ ವನ್ನು ಹಾರಿಸಲಿದ್ದಾರೆ.ದೇವಾಲಯದ ಸಂಕೀರ್ಣವು ಸುಮಾರು 60 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಮುಖ್ಯ ರಾಮಮಂದಿರದ ಜೊತೆಗೆ ಸಪ್ತರ್ಷಿಗಳಿಗೆ ಸಂಬಂಧಿಸಿದ ಏಳು ವಿಶೇಷ ದೇವಾಲಯಗಳು, ಗಣಪತಿ ದೇವಾಲಯ ಮತ್ತು ರಾಮಾಯಣದಲ್ಲಿ ಅಳಿಲಿನ ಸೇವೆಗೆ ಗೌರವ ಸಲ್ಲಿಸುವ ವಿಶೇಷ ಶಿಲ್ಪವನ್ನೂ ನಿರ್ಮಿಸಲಾಗಿದೆ.

ರಾಮ ಮಂದಿರ ಸಂಕೀರ್ಣ ಮತ್ತು ಸುತ್ತಮುತ್ತಲಿನ ಸಂತರು ಮತ್ತು ಋಷಿಗಳು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದ್ದಾರೆ, ಈ ಸಂದರ್ಭವನ್ನು ಐತಿಹಾಸಿಕವೆಂದು ಕರೆದರು. ಬೆಳಗಿನ ಜಾವ ಘಾಟ್‌ಗಳು, ಬೀದಿಗಳು ಮತ್ತು ದೇವಾಲಯಗಳಲ್ಲಿ ಭಕ್ತರ ಗುಂಪು ನೆರೆದಿತ್ತು. ಈ ಕ್ಷಣ ಶತಮಾನಗಳ ತಪಸ್ಸಿಗೆ ಸಂದ ಜಯವಾಗಿದೆ ಮತ್ತು ಧ್ವಜಾರೋಹಣ ಸಮಾರಂಭದಲ್ಲಿ ಉಪಸ್ಥಿತರಿರುವುದು ತಮ್ಮ ಪುಣ್ಯ ಎಂದು ಭಕ್ತರು ಹೇಳಿದ್ದಾರೆ.




