ರಾಮನಗರ ನಗರದಲ್ಲಿ ಇರುವ ಏಕೈಕ ಅತಿದೊಡ್ಡ ಕೆರೆ ಇದಾಗಿದ್ದು, ಸುಮಾರು ನೂರಾರು ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣ ಮಾಡಲಾಗಿದೆ. ಈ ಹಿಂದೆ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ, ಕೆರೆಯ ಬಳಿ ವಾಕಿಂಗ್ ಪಾಥ್ ನಿರ್ಮಾಣ ಮಾಡಿ, ಬೊಟಿಂಗ್ ವ್ಯವಸ್ಥೆಯನ್ನ ಕಲ್ಪಿಸಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ಬೊಟಿಂಗ್ ವ್ಯವಸ್ಥೆಯನ್ನ ರದ್ದು ಮಾಡಲಾಗಿದೆ.