
ಉಡುಪಿ ವಿಧಾನಸಭಾ ಕ್ಷೇತ್ರದ ಕುಕ್ಕಿಕಟ್ಟೆಯ ಶಾಲೆಯಲ್ಲಿ ರಕ್ಷಿತ್ ಶೆಟ್ಟಿ ಮತ ಹಾಕಿದ್ದಾರೆ. ಅವರ ಜೊತೆ ತಂದೆ ಶ್ರೀಧರ್ ಶೆಟ್ಟಿ, ತಾಯಿ ರಂಜನಾ ಶೆಟ್ಟಿ ಸಹೋದರ ರಂಜಿತ್ ಶೆಟ್ಟಿ ಆಗಮಿಸಿದ್ದರು.

ರಾಘವೇಂದ್ರ ರಾಜ್ಕುಮಾರ್ ಹಾಗೂ ಯುವ ರಾಜ್ಕುಮಾರ್ ಅವರು ಬೆಂಗಳೂರಿನಲ್ಲಿ ವೋಟ್ ಹಾಕಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ದಂಪತಿ ಅವರು ಇಂದು ಮತದಾನ ಮಾಡಿದ್ದಾರೆ. ಬೆಂಗಳೂರಿನ ಆರ್.ಆರ್. ನಗರದಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಗಣೇಶ್ ದಂಪತಿ ಮತ ಚಲಾಯಿಸಿದ್ದಾರೆ.

ನಟಿ ಉಮಾಶ್ರೀ ಅವರು ಬಾಗಲಕೋಟೆಯಲ್ಲಿ ತಮ್ಮ ಮತ ಹಾಕಿದ್ದಾರೆ. ಅವರು ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಅವರು ಮಾಜಿ ಎಂಎಲ್ಎ ಕೂಡ ಹೌದು.

ಅಮೂಲ್ಯ ಅವರು ಮುಂಜಾನೆ 7 ಗಂಟೆಗೆ ಪತಿ ಜೊತೆ ಬಂದು ವೋಟ್ ಹಾಕಿದ್ದಾರೆ. ಆರ್ಆರ್ ನಗರದಲ್ಲಿ ಅವರು ಮತ ಚಲಾಯಿಸಿದ್ದಾರೆ.

ರಮೇಶ್ ಅರವಿಂದ್ ಹಾಗೂ ಅವರ ಪತ್ನಿ ಅರ್ಚನಾ ಅವರು ಜೆಪಿ ನಗರದಲ್ಲಿ ವೋಟ್ ಹಾಕಿದ್ದಾರೆ. ಸರತಿ ಸಾಲಿನಲ್ಲಿ ದಂಪತಿ ನಿಂತಿದ್ದರು.

ಜಗ್ಗೇಶ್ ಅವರು ಮಲ್ಲೇಶ್ವರದಲ್ಲಿ ವೋಟ್ ಮಾಡಿದ್ದಾರೆ. ಜೊತೆಗೆ ತಪ್ಪದೇ ಮತದಾನ ಮಾಡುವಂತೆ ಅವರು ಕೋರಿದ್ದಾರೆ.
Published On - 9:57 am, Wed, 10 May 23