Updated on: Mar 18, 2024 | 2:57 PM
ನಟ ರಮೇಶ್ ಅರವಿಂದ್ ಅವರು ಇತ್ತೀಚೆಗೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ಆ ಸಂದರ್ಭದ ಫೋಟೋನ ಅವರು ಹಂಚಿಕೊಂಡು ಸಂಭ್ರಮಿಸಿದ್ದಾರೆ. ಅವರು ಮಂತ್ರಾಲಯಕ್ಕೆ ತೆರಳಲೂ ಒಂದು ಪ್ರಮುಖ ಕಾರಣ ಇದೆ.
ಮಂತ್ರಾಲಯದಲ್ಲಿ ಇತ್ತೀಚೆಗೆ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವ ನಡೆದಿದೆ. ಈ ಸಂದರ್ಭದಲ್ಲಿ ರಮೇಶ್ ಅರವಿಂದ್ ಕೂಡ ಭಾಗಿ ಆಗಿದ್ದರು. ಇದಕ್ಕೆ ಒಂದು ವಿಶೇಷ ಕಾರಣ ಇದೆ.
ಸುಬುಧೇಂದ್ರ ತೀರ್ಥರ ಸಾನಿಧ್ಯದಲ್ಲಿ, ಸಸ್ಫೆಸ್ ಮೀಡಿಯಾದ ಸಹಯೋಗದೊಂದಿಗೆ ‘ಮರಳಿ ಸಂಸ್ಕೃತಿಗೆ’ ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ್ ಭಾಗಿ ಆಗಿದ್ದರು. ಅವರಿಗೆ ‘ಮಂತ್ರಾಲಯ ಪರಿಮಳ ಪ್ರಶಸ್ತಿ’ ನೀಡಲಾಗಿದೆ.
ಈ ಮೊದಲು ಅನೇಕ ಗಣ್ಯರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜ್ಕುಮಾರ್, ರಜನಿಕಾಂತ್, ಶಿವರಾಜ್ಕುಮಾರ್, ಸುಧಾಮೂರ್ತಿ, ದರ್ಶನ್, ಪುನೀತ್ ರಾಜ್ಕುಮಾರ್ ಪ್ರಶಸ್ತಿ ಸಿಕ್ಕಿದೆ. ಈ ಬಾರಿ ರಮೇಶ್ ಅವರು ಪ್ರಶಸ್ತಿ ಪಡೆದಿದ್ದಾರೆ.
2023ರಲ್ಲಿ ಅವರ ನಟನೆಯ ‘ಶಿವಾಜಿ ಸುರತ್ಕಲ್ 2’ ರಿಲೀಸ್ ಆಯಿತು. ಇದಾದ ಬಳಿಕ ಅವರು ಯಾವುದೇ ಹೊಸ ಸಿನಿಮಾ ರಿಲೀಸ್ ಆಗಿಲ್ಲ.