
2022ರ ಮುಕ್ತಾಯಕ್ಕೆ ಕ್ಷಣಗಣನೆ ಆರಂಭ ಆಗಿದೆ. 2023ರ ವರ್ಷವನ್ನು ಸ್ವಾಗತಿಸಲು ಇಡೀ ಜಗತ್ತು ಸಜ್ಜಾಗಿದೆ. ನಟಿ ರಮ್ಯಾ ಕೂಡ ಭಾರಿ ಖುಷಿಯಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳಲು ತಯಾರಾಗಿದ್ದಾರೆ.

ಚಿತ್ರರಂಗಕ್ಕೆ ಮರಳಿರುವ ರಮ್ಯಾ ಅವರು ವಿದೇಶ ಪ್ರವಾಸವನ್ನು ತಪ್ಪಿಸಿಕೊಂಡಿಲ್ಲ. ಈಗ ಅವರು ಹೊಸ ವರ್ಷವನ್ನು ಆಚರಿಸಲು ಲಂಡನ್ಗೆ ತೆರಳಿದ್ದಾರೆ. ಅಲ್ಲಿಯೇ ಈ ಬಾರಿ ಹೊಸ ವರ್ಷಾಚರಣೆ ಮಾಡಲಿದ್ದಾರೆ.

ವಿದೇಶಕ್ಕೆ ಹೋಗಿರುವ ರಮ್ಯಾಗೆ ಕನ್ನಡದ ನಟಿ ಅಮೃತಾ ಅಯ್ಯಂಗಾರ್ ಕೂಡ ಸಾಥ್ ನೀಡಿದ್ದಾರೆ. ಇಬ್ಬರೂ ಸೇರಿ ಲಂಡನ್ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸುಂದರ ಲೊಕೇಷನ್ಗಳ ಫೋಟೋಗಳನ್ನು ರಮ್ಯಾ ಅವರು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಮೃತಾ ಅಯ್ಯಂಗಾರ್ ಜೊತೆ ಇರುವ ಸೆಲ್ಫಿಯನ್ನೂ ಅವರು ಹಂಚಿಕೊಂಡಿದ್ದಾರೆ.

ರಮ್ಯಾ ಮತ್ತು ಅಮೃತಾ ಅಯ್ಯಂಗಾರ್ ಅವರ ಅಭಿಮಾನಿ ಬಳಗದಲ್ಲಿ ಈ ಫೋಟೋಗಳು ವೈರಲ್ ಆಗಿವೆ. ಮುಂಚಿತವಾಗಿ ಎಲ್ಲರೂ ಹೊಸ ವರ್ಷದ ಶುಭಾಶಯ ಕೋರುತ್ತಿದ್ದಾರೆ. ರಮ್ಯಾ ನಟನೆಯ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಿದೆ.