
‘ಬಾಹುಬಲಿ’ ಸಿನಿಮಾದಲ್ಲಿ ರಾಜಮೌಳಿ ಜೊತೆ ಕೆಲಸ ಮಾಡಿದ್ದರು ರಮ್ಯಾ ಕೃಷ್ಣ. ಈ ಚಿತ್ರದಲ್ಲಿ ಅವರು ಶಿವಗಾಮಿ ದೇವಿ ಹೆಸರಿನ ಪಾತ್ರ ಮಾಡಿದ್ದರು. ಈ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಈಗ ರಾಮ್ ಗೋಪಾಲ್ ವರ್ಮಾ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ.

ಕಾಮಿಡಿ ಹಾರರ್ ಶೈಲಿಯಲ್ಲಿ ಮೂಡಿ ಬರುತ್ತಿರುವ ‘ಪೊಲೀಸ್ ಸ್ಟೇಷನ್ ಮೇ ಭೂತ್’ ಹೆಸರಿನ ಸಿನಿಮಾದಲ್ಲಿ ರಮ್ಯಾ ಕೃಷ್ಣ ನಟಿಸಿದ್ದಾರೆ. ಅವರ ಲುಕ್ ಸಾಕಷ್ಟು ಗಮನ ಸೆಳೆಯುವ ರೀತಿಯಲ್ಲಿ ಇದೆ. ಅವರ ಗೆಟಪ್ ಸಂಪೂರ್ಣವಾಗಿ ಭಿನ್ನವಾಗಿದೆ.

ರಮ್ಯಾ ಕೃಷ್ಣ ಅವರು ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಅವರು ಕೈಯಲ್ಲಿ ಸಿಗರೇಟ್ ಹಿಡಿದು ಪೋಸ್ ಕೊಟ್ಟವರಲ್ಲ. ಆದರೆ, ಈ ಚಿತ್ರದಲ್ಲಿ ರಮ್ಯಾ ಅವರು ಕೈಯಲ್ಲಿ ಸಿಗರೇಟ್ ಹಿಡಿದು ನಿಂತಿದ್ದಾರೆ. ಅವರ ಲುಕ್ ಭಿನ್ನವಾಗಿದೆ.

ರಮ್ಯಾ ಕೃಷ್ಣ ಅವರು ರಾಜ್ದೂತ್ ಬೈಕ್ ರೈಡ್ ಮಾಡುತ್ತಾರೆ. ಅವರು ಬೈಕ್ನಿಂದ ಇಳಿಯುತ್ತಿರುವ ಫೋಟೋ ಕೂಡ ಗಮನ ಸೆಳೆಯುವ ರೀತಿಯಲ್ಲಿ ಇದೆ. ರಮ್ಯಾ ಕೃಷ್ಣ ಲುಕ್ ಗಮನ ಸೆಳೆಯುವ ರೀತಿಯಲ್ಲಿ ಇದೆ ಎಂಬುದು ಫ್ಯಾನ್ಸ್ ಅಭಿಪ್ರಾಯ.

‘ಪೊಲೀಸ್ ಸ್ಟೇಷನ್ ಮೇ ಭೂತ್’ ಹಿಂದಿ ಸಿನಿಮಾ. ಇದಕ್ಕೆ ರಾಮ್ ಗೋಪಾಲ್ ವರ್ಮ ನಿರ್ದೇಶನ ಇದೆ. ಈ ಚಿತ್ರಕ್ಕೆ ಮನೋಜ್ ಬಾಜ್ಪಾಯಿ ಅವರು ನಿರ್ದೇಶನ ಮಾಡಿದ್ದಾರೆ.