Rashmika Mandanna: ಫೋಟೋ ಹಂಚಿಕೊಂಡು ಗುಡ್ ನ್ಯೂಸ್ ನೀಡಿದ ರಶ್ಮಿಕಾ ಮಂದಣ್ಣ; ಕೊಡಗಿನ ಬೆಡಗಿ ಸಖತ್ ಫಾಸ್ಟ್
Rashmika Mandanna Photos: ನಟ ದೇವ್ ಮೋಹನ್ ಮತ್ತು ತಮ್ಮ ಕುಟುಂಬದ ಜೊತೆಗಿನ ಸೆಲ್ಫಿಯನ್ನು ನಟಿ ರಶ್ಮಿಕಾ ಮಂದಣ್ಣ ಅವರು ಹಂಚಿಕೊಂಡಿದ್ದಾರೆ. ಆ ಮೂಲಕ ಅವರು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
1 / 5
ನಟಿ ರಶ್ಮಿಕಾ ಮಂದಣ್ಣ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗ ಅವರು ‘ರೇನ್ ಬೋ’ ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಗಿಸಿರುವುದಾಗಿ ಗುಡ್ ನ್ಯೂಸ್ ನೀಡಿದ್ದಾರೆ. ಆ ಬಗ್ಗೆ ಅಪ್ಡೇಟ್ ಇಲ್ಲಿದೆ.
2 / 5
ಸಿನಿಮಾ ಕೆಲಸಗಳನ್ನು ಮುಗಿಸುವಲ್ಲಿ ಕೊಡಗಿನ ಬೆಡಗಿ ರಶ್ಮಿಕಾ ಅವರು ಸಖತ್ ಫಾಸ್ಟ್ ಆಗಿದ್ದಾರೆ. ಒಂದೆಡೆ ‘ಪುಷ್ಪ 2’ ಸಿನಿಮಾದ ಶೂಟಿಂಗ್ ಹಾಗೂ ಇನ್ನೊಂದೆಡೆ ‘ರೇನ್ ಬೋ’ ಚಿತ್ರದ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ.
3 / 5
‘ರೇನ್ ಬೋ’ ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿಯಿತು ಎಂಬುದನ್ನು ತಿಳಿಸಲು ರಶ್ಮಿಕಾ ಮಂದಣ್ಣ ಅವರು ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟ ದೇವ್ ಮೋಹನ್ ಜೊತೆಗಿನ ಸೆಲ್ಫಿಯನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.
4 / 5
ರಶ್ಮಿಕಾ ಮಂದಣ್ಣ ಅವರ ವೃತ್ತಿಜೀವನಕ್ಕೆ ಇಡೀ ಕುಟುಂಬದ ಬೆಂಬಲ ಇದೆ. ‘ರೇನ್ ಬೋ’ ಶೂಟಿಂಗ್ ನೋಡಲು ರಶ್ಮಿಕಾ ಸಹೋದರಿ ಕೂಡ ಬಂದಿದ್ದರು. ಆ ಸಂದರ್ಭದಲ್ಲಿ ಕ್ಲಿಕ್ಕಿಸಿದ ಫೋಟೋ ಇದು.
5 / 5
ಫ್ಯಾಮಿಲಿ ಜೊತೆ ಕಾಲ ಕಳೆಯುವ ಸಂದರ್ಭವನ್ನು ರಶ್ಮಿಕಾ ಮಂದಣ್ಣ ತುಂಬ ಎಂಜಾಯ್ ಮಾಡುತ್ತಾರೆ. ಸದಾ ಕಾಲ ಶೂಟಿಂಗ್ನಲ್ಲಿ ಬ್ಯುಸಿ ಆಗಿರುವ ಅವರು, ಕೆಲಸದ ಬಿಡುವಿನಲ್ಲಿ ಕುಟುಂಬಕ್ಕೆ ಸಮಯ ಮೀಸಲಿಡುತ್ತಾರೆ.