
ರಶ್ಮಿಕಾ ಮಂದಣ್ಣ ಪಾಲಿನಲ್ಲಿ ಹಲವು ದಾಖಲೆಗಳು ಇವೆ. ಅವರ ನಟನೆಯ ‘ಪುಷ್ಪ 2’ ಸಿನಿಮಾ 1700+ ಕೋಟಿ ರೂಪಾಯಿ ಬಾಚಿಕೊಂಡಿದೆ. ಅದೇ ರೀತಿ ‘ಅನಿಮಲ್’, ‘ಛಾವ’ ಚಿತ್ರಗಳು 500 ಕೋಟಿ ರೂಪಾಯಿ ಕ್ಲಬ್ ಸೇರಿದೆ. ‘ಪುಷ್ಪ’ ಸಿನಿಮಾ 300 ಕೋಟಿ ರೂಪಾಯಿ ಗಳಿಸಿತ್ತು.

ರಶ್ಮಿಕಾ ಮಂದಣ್ಣ ಅವರ ಅನೇಕ ಚಿತ್ರಗಳು ಅನಾಯಾಸವಾಗಿ 100 ಕೋಟಿ ರೂಪಾಯಿ ಕ್ಲಬ್ ಸೇರಿದ ಉದಾಹರಣೆ ಇದೆ. ಈಗ ಅವರ ಅಭಿನಯದ ‘ಕುಬೇರ’ ಸಿನಿಮಾ ಕೂಡ ಗೆದ್ದು ಬೀಗಿದೆ. ಈ ಚಿತ್ರದ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ರಶ್ಮಿಕಾ ಮಂದಣ್ಣ ಅವರು ಧನುಷ್, ನಾಗಾರ್ಜುನ ಜೊತೆ ‘ಕುಬೇರ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಕಳೆದ ಶುಕ್ರವಾರ (ಜೂನ್ 20) ರಿಲೀಸ್ ಆಯಿತು. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

‘ಕುಬೇರ’ ಸಿನಿಮಾ ಭಾರತದಲ್ಲಿ 65.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನು, ವಿಶ್ವ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ 100 ಕೋಟಿ ರೂಪಾಯಿಗೂ ಅಧಿಕಲೆಕ್ಷನ್ ಮಾಡಿದೆ. ಇದರಿಂದ ರಶ್ಮಿಕಾ ಅಭಿಮಾನಿಗಳು ಸಾಕಷ್ಟು ಖುಷಿಯಾಗಿದ್ದಾರೆ.

ರಶ್ಮಿಕಾ ನಟನೆಯ ‘ಸಿಕಂದರ್’ ಸಿನಿಮಾ ಹೀನಾಯ ಸೋಲು ಕಂಡಿತು. ಆದಾಗ್ಯೂ ಈ ಚಿತ್ರ ಭಾರತದ ಬಾಕ್ಸ್ ಆಫೀಸ್ನಲ್ಲಿ 150 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಸಿನಿಮಾಗೆ ಸಲ್ಮಾನ್ ಖಾನ್ ಅವರು ಹೀರೋ ಆಗಿದ್ದರು.