ಜಪಾನ್​​ನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ; ವಿದೇಶಿ ನಟನ ಮೆಚ್ಚುಗೆ

Updated on: May 28, 2026 | 10:03 AM

ಟೋಕಿಯೋದಲ್ಲಿ ನಡೆದ ಜಾಗತಿಕ ಮಟ್ಟದ ಅನಿಮೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಭಾಗವಹಿಸಿ ಜಾಗತಿಕ ವೇದಿಕೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಅನಿಮೆ ಅಭಿಮಾನಿ ಎಂಬುದು ವಿಶೇಷ.

1 / 5
ಟೋಕಿಯೋದಲ್ಲಿ ನಡೆದ ಪ್ರತಿಷ್ಠಿತ ‘ಕ್ರಂಚೈರಾಲ್ ಅನಿಮೆ ಅವಾರ್ಡ್ಸ್ 2026’ ಸಮಾರಂಭದಲ್ಲಿ  ಸ್ಟಾರ್ ನಟಿ ರಶ್ಮಿಕಾ ಮಂದಣ್ಣ  ಮಿಂಚಿದ್ದಾರೆ. ಜಾಗತಿಕ ಮಟ್ಟದ ಈ ದೊಡ್ಡ ವೇದಿಕೆಯಲ್ಲಿ ಅಂತರರಾಷ್ಟ್ರೀಯ ತಾರೆಯರ ಮಧ್ಯೆ ರಶ್ಮಿಕಾ ಗಮನ ಸೆಳೆದಿದ್ದು, ದೇಶದ ಕೀರ್ತಿ ಹೆಚ್ಚಿಸಿದ್ದಾರೆ.

ಟೋಕಿಯೋದಲ್ಲಿ ನಡೆದ ಪ್ರತಿಷ್ಠಿತ ‘ಕ್ರಂಚೈರಾಲ್ ಅನಿಮೆ ಅವಾರ್ಡ್ಸ್ 2026’ ಸಮಾರಂಭದಲ್ಲಿ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಮಿಂಚಿದ್ದಾರೆ. ಜಾಗತಿಕ ಮಟ್ಟದ ಈ ದೊಡ್ಡ ವೇದಿಕೆಯಲ್ಲಿ ಅಂತರರಾಷ್ಟ್ರೀಯ ತಾರೆಯರ ಮಧ್ಯೆ ರಶ್ಮಿಕಾ ಗಮನ ಸೆಳೆದಿದ್ದು, ದೇಶದ ಕೀರ್ತಿ ಹೆಚ್ಚಿಸಿದ್ದಾರೆ.

2 / 5

ಅನಿಮೆ ಪ್ರಶಸ್ತಿ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಅವರು ‘ಬ್ಲಾಕ್ ಪ್ಯಾಂಥರ್’ ಖ್ಯಾತಿಯ ನಟ ವಿನ್‌ಸ್ಟನ್ ಡ್ಯೂಕ್ ಜೊತೆ ವೇದಿಕೆ ಹಂಚಿಕೊಂಡರು. ಇವರಿಬ್ಬರು ಒಟ್ಟಾಗಿ ಈ ಸಾಲಿನ ಪ್ರತಿಷ್ಠಿತ ‘ಬೆಸ್ಟ್ ಅನಿಮೇಷನ್ ಆಫ್ ದಿ ಇಯರ್’ ಪ್ರಶಸ್ತಿ ಪ್ರದಾನ ಮಾಡಿದರು.

3 / 5

ಕಾರ್ಯಕ್ರಮದ ಯಶಸ್ಸಿನ ಬೆನ್ನಲ್ಲೇ ನಟ ವಿನ್‌ಸ್ಟನ್ ಡ್ಯೂಕ್ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ರಶ್ಮಿಕಾ ಜೊತೆಗಿನ ಫೋಟೋ ಹಂಚಿಕೊಂಡ ಅವರು, ಅಪ್ರತಿಮ ನಟಿ ರಶ್ಮಿಕಾ ಮಂದಣ್ಣ ಅವರೊಂದಿಗೆ ಈ ಜಾಗತಿಕ ವೇದಿಕೆಯ ವಿಶೇಷ ಕ್ಷಣ ಹಂಚಿಕೊಂಡಿದ್ದು ಹೆಮ್ಮೆ ತಂದಿದೆ ಎಂದಿದ್ದಾರೆ.

4 / 5

ವಿಶ್ವದಾದ್ಯಂತ ಸುಮಾರು 73 ಮಿಲಿಯನ್ ಅನಿಮೆ ಅಭಿಮಾನಿಗಳು ವೋಟ್ ಮಾಡಿದ್ದ ಈ ಭಾರಿ ಜನಪ್ರಿಯ ಕಾರ್ಯಕ್ರಮದಲ್ಲಿ ಜಾಗತಿಕ ರಾಪರ್ ಯಂಗ್ ಮಿಕೊ ಮತ್ತು ಪ್ರಸಿದ್ಧ ಕೆ-ಪಾಪ್ ಕಲಾವಿದರಾದ ಬಾಮ್‌ಬಾಮ್ ಹಾಗೂ ಟೆನ್ ಸೇರಿದಂತೆ ವಿಶ್ವದ ಹಲವು ಪ್ರಮುಖ ಅಂತರರಾಷ್ಟ್ರೀಯ ತಾರೆಯರು ಭಾಗವಹಿಸಿದ್ದರು.

5 / 5

ಸದ್ಯ ರಶ್ಮಿಕಾ ಮಂದಣ್ಣ ಅವರ ಹೆಸರು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆ. ಬಾಲಿವುಡ್‌ನ ‘ಕಾಕ್‌ಟೇಲ್ 2’ ಚಿತ್ರದಲ್ಲಿ ಶಾಹಿದ್ ಕಪೂರ್ ಜೊತೆ ನಟಿಸಿರುವ ಅವರು, ಪ್ಯಾನ್-ಇಂಡಿಯಾ ಮಟ್ಟದ ಭಾರಿ ನಿರೀಕ್ಷೆಯ ‘ಪುಷ್ಪ 3’ ಮತ್ತು ‘ಅನಿಮಲ್ ಪಾರ್ಕ್’ ಚಿತ್ರಗಳಲ್ಲೂ ಬ್ಯುಸಿ ಆಗಲಿದ್ದಾರೆ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us