
ನಟಿ ರಶ್ಮಿಕಾ ಮಂದಣ್ಣ ಕನ್ನಡ, ತೆಲುಗು ಚಿತ್ರರಂಗಗಳ ಬಳಿಕ ಬಾಲಿವುಡ್ಗೆ ಕಾಲಿರಿಸಿ ಅಲ್ಲಿಯೂ ಸಹ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ.

ಕನ್ನಡ ತೆಲುಗು ಚಿತ್ರರಂಗದಲ್ಲಿದ್ದಾಗ ಪಕ್ಕದ ಮನೆ ಹುಡುಗಿ ಪಾತ್ರಗಳಲ್ಲಿ ಮಿಂಚುತ್ತಿದ್ದ ನಟಿ ರಶ್ಮಿಕಾ, ಈಗ ಬಾಲಿವುಡ್ಗೆ ಕಾಲಿರಿಸಿ ಅಲ್ಲಿನ ಗ್ಲಾಮರ್ ಗಾಳಿ ಸೋಕಿಸಿಕೊಂಡಿದ್ದಾರೆ.

ಬಾಲಿವುಡ್ ಸಿನಿಮಾಕ್ಕಾಗಿ ರಶ್ಮಿಕಾ ಮಂದಣ್ಣ ಗ್ಲಾಮರಸ್ ನಾಯಕಿಯಾಗಿ ಬದಲಾಗಿದ್ದಾರೆ. ತಮ್ಮ ಗ್ಲಾಮರಸ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ನಟಿ.

ಬಾಲಿವುಡ್ ಸಿನಿಮಾ ‘ಥಮ’ನಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಸಿನಿಮಾಕ್ಕಾಗಿ ಹಾಟ್ ಅವತಾರ ತಾಳಿದ್ದಾರೆ ನಟಿ ರಶ್ಮಿಕಾ. ಸಿನಿಮಾದ ಹಾಡೊಂದರಲ್ಲಿ ಬಲು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

‘ಥಮ’ ರಶ್ಮಿಕಾ ಮಂದಣ್ಣ ನಟಿಸಿರುವ ಮೊದಲ ಹಾರರ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಆಯುಷ್ಮಾನ್ ಖುರಾನಾ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.

‘ಥಮ’ ಸಿನಿಮಾದ ಹಾಡೊಂದರಲ್ಲಿ ಮಾತ್ರವಲ್ಲದೆ ಇಡೀ ಸಿನಿಮಾನಲ್ಲಿ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ ನಟಿ. ಆಯುಷ್ಮಾನ್ ಜೊತೆ ಲಿಪ್ಲಾಕ್ ಸಹ ಮಾಡಿದ್ದಾರೆ.

‘ಥಮ’ ಸಿನಿಮಾನಲ್ಲಿ ಖ್ಯಾತ ನಟ ನವಾಜುದ್ಧೀನ್ ಸಿದ್ಧಿಖಿ ವಿಲನ್ ಆಗಿ ನಟಿಸಿದ್ದು. ಸಿನಿಮಾ ಅನ್ನು ಮ್ಯಾಡ್ಲಾಕ್ ಫಿಲಮ್ಸ್ ನಿರ್ಮಾಣ ಮಾಡಿದೆ. ಸಿನಿಮಾ ಅಕ್ಟೋಬರ್ 21ರಂದು ಬಿಡುಗಡೆ ಆಗಲಿದೆ.