
ರಶ್ಮಿಕಾ ಮಂದಣ್ಣ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಬಹುಭಾಷೆಯಲ್ಲಿ ಅವರಿಗೆ ಆಫರ್ ಇದೆ. ಆ ಪೈಕಿ ‘ಸೀತಾ ರಾಮಮ್’ ಸಿನಿಮಾ ಹೆಚ್ಚು ನಿರೀಕ್ಷೆ ಸೃಷ್ಟಿ ಮಾಡಿದೆ.

‘ಸೀತಾ ರಾಮಮ್’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ಮುಸ್ಲಿಂ ಹುಡುಗಿಯ ಪಾತ್ರ ಮಾಡುತ್ತಿದಾರೆ. ಅದಕ್ಕೆ ತಕ್ಕಂತೆಯೇ ಅವರು ಗೆಟಪ್ ವಿಶೇಷವಾಗಿದೆ. ಕೆಲವು ಪೋಸ್ಟರ್ಗಳು ವೈರಲ್ ಆಗಿವೆ.

ಬಕ್ರೀದ್ ಹಬ್ಬದ ಪ್ರಯುಕ್ತ ‘ಸೀತಾ ರಾಮಮ್’ ಸಿನಿಮಾದಿಂದ ಹೊಸ ಪೋಸ್ಟರ್ ಹಂಚಿಕೊಳ್ಳಲಾಗಿದೆ. ಆ ಮೂಲಕ ಹಬ್ಬಕ್ಕೆ ಶುಭಾಶಯ ಕೋರಲಾಗಿದೆ. ಆ ಮೂಲಕ ಚಿತ್ರದ ಮೇಲಿನ ಕೌತುಕ ಹೆಚ್ಚಿಸಲಾಗಿದೆ.

ರಶ್ಮಿಕಾ ಮಂದಣ್ಣ ಅವರು ಹಿಜಾಬ್ ಧರಿಸಿ ಕಾಣಿಸಿಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅವರು ಈ ಪೋಸ್ಟರ್ಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಇದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಈ ಮೊದಲು ರಿಲೀಸ್ ಆಗಿದ್ದ ಫಸ್ಟ್ ಲುಕ್ ಪೋಸ್ಟರ್ ಕೂಡ ಹೆಚ್ಚು ಗಮನ ಸೆಳೆದಿತ್ತು. ‘ಸೀತಾ ರಾಮಮ್’ ಚಿತ್ರದಲ್ಲಿ ಅವರು ಆಫ್ರೀನ್ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ದುಲ್ಖಾರ್ ಸಲ್ಮಾನ್ ಹೀರೋ.