Ravana Temples: ಭಾರತದ ಈ 8 ದೇವಾಲಯಗಳಲ್ಲಿ ರಾಮ ಅಲ್ಲ; ರಾವಣನನ್ನು ಪೂಜಿಸುತ್ತಾರೆ! ಕರ್ನಾಟಕದಲ್ಲಿ ಎಲ್ಲೆಲ್ಲಿ?

Dasara 2024: ದಸರಾ ಎಂದರೆ ದುಷ್ಟರ ಮೇಲೆ ಒಳಿತಿನ ವಿಜಯವನ್ನು ಸ್ಮರಿಸುವ, ಸಾಧಿಸುವ ದಿನ. ರಾವಣಾಸುರನನ್ನು ಸೋಲಿಸಿದ ಶ್ರೀರಾಮನ ವಿಜಯದ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ನವರಾತ್ರಿಯ ಮರುದಿನ ಅಂದರೆ 10ನೇ ದಿನ ರಾವಣಾಸುರನ ದೃಷ್ಟಿ ಬೊಂಬೆಯನ್ನು ಸುಟ್ಟು ವಿಜಯೋತ್ಸವ ಆಚರಿಸಲಾಗುತ್ತದೆ. ಈ ರಾವಣ ದಹನವನ್ನು ದೇಶದಾದ್ಯಂತ ಹಬ್ಬ ಸಂಭ್ರಮದಲ್ಲಿ ಆಚರಿಸಲಾಗುತ್ತದೆ. ರಾಕ್ಷಸ ರಾಜ ರಾವಣನಿಂದ ಸೀತಾದೇವಿಯನ್ನು ಅಪಹರಿಸಲಾಯಿತು. ರಾಮಾಯಣದಲ್ಲಿ ಒಬ್ಬ ಖಳನಾಯಕ. ಆದರೆ ಶಿವನ ಮಹಾಭಕ್ತನಾದ ರಾವಣ ನಮ್ಮ ದೇಶದ ಕೆಲವು ಭಾಗಗಳಲ್ಲಿ ವೀರನೂ ಆಗಿದ್ದಾನೆ. ಲಂಕಾಧಿಪತಿ ರಾವಣನನ್ನು ಕೆಲವು ಕಡೆ ಪ್ರತಿನಿತ್ಯ ಪೂಜಿಸಲಾಗುತ್ತದೆ. ದೇಶದ ಈ 8 ಸ್ಥಳಗಳಲ್ಲಿ ಮರ್ಯಾದಾಪುರುಷೋತ್ತಮ ರಾಮನನ್ನು ಅಲ್ಲ, ಆದರೆ ರಾಕ್ಷಸ ರಾಜ ರಾವಣನನ್ನು ಪೂಜಿಸಲಾಗುತ್ತದೆ. ಆ ದೇಗುಲ ಸ್ಥಳಗಳು ಯಾವುವು ಎಂದು ತಿಳಿದುಕೊಳ್ಳೋಣ (Ravana is worshipped in 8 places).

ಸಾಧು ಶ್ರೀನಾಥ್​
|

Updated on:Oct 01, 2024 | 1:30 PM

1 / 9
1. ಮಂದಸೌರ್, ಮಧ್ಯಪ್ರದೇಶ: ಹಿಂದೂ ಧರ್ಮಗ್ರಂಥಗಳ ಪ್ರಕಾರ ರಾವಣನ ಪತ್ನಿ ಮಾಂಡೋದೇವಿ (Mandodari) ಮಧ್ಯಪ್ರದೇಶದ ಮಂದಸೌರ್‌ನಲ್ಲಿ (Mandsaur, Madhya Pradesh) ಜನಿಸಿದಳು. ಆದುದರಿಂದ ಇಲ್ಲಿನ ಜನರು ರಾವಣನನ್ನು ಮಂದಸೌರ್‌ನ ಅಳಿಯ ಎಂದು ಪೂಜಿಸುತ್ತಾರೆ. ದಸರಾ ಹಬ್ಬದ ಸಂದರ್ಭದಲ್ಲಿ ಸ್ಥಳೀಯ ಜನರು ರಾವಣನ ಮನೆಯಲ್ಲಿ ದೀಪಗಳನ್ನು ಹಚ್ಚಿ ಪೂಜಿಸುತ್ತಾರೆ.

2 / 9
2. ವಿದಿಶಾದ ರಾವಣಗ್ರಾಮದಲ್ಲಿದೆ ರಾವಣ ದೇವಾಲಯ:  
ರಾವಣಗ್ರಾಮವು ರಾವಣನ ಹೆಸರಿನಲ್ಲಿರುವ ಗ್ರಾಮವಾಗಿದ್ದು (Ravangram Ravana Temple, Vidisha, Madhya Pradesh), ಇದು ಲಂಕಾ ರಾಜನಿಗೆ ಸಮರ್ಪಿತವಾದ ಅತ್ಯಂತ ಪ್ರಸಿದ್ಧ ದೇವಾಲಯ ತಾಣವಾಗಿದೆ. ರಾವಣನ ಹೆಂಡತಿ ಮಂಡೋದರಿ ವಿದಿಶಾದಿಂದ ಬಂದವಳು. ಈ ಸ್ಥಳವು ಗಮನಾರ್ಹ ಸಂಖ್ಯೆಯಲ್ಲಿ ರಾವಣ ಭಕ್ತರನ್ನು ಹೊಂದಿದೆ. ಅವರು ತಮ್ಮ ಗೌರವವನ್ನು ಸಲ್ಲಿಸಲು ಈ ದೇವಾಲಯಕ್ಕೆ ಬರುತ್ತಾರೆ. ಈ ದೇವಾಲಯವು ಬೃಹದಾದ 10 ಅಡಿ  ಎತ್ತರದ ರಾವಣನ ಪ್ರತಿಮೆಯನ್ನು ಹೊಂದಿದೆ. ಒಂದು ಕಾಲದಲ್ಲಿ ಈ ದೇವಾಲಯದಲ್ಲಿ, ಇತರೆ ಸ್ಥಳಗಳಲ್ಲಿ ನಡೆಯುವಂತೆ, ಮದುವೆಗಳು ಮತ್ತು ಇತರೆ ಮಂಗಳ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿದ್ದವು. ಏಕೆಂದರೆ ರಾವಣ ಮತ್ತು ಮಂಡೋದರಿಯ ವಿವಾಹವು ಮಂಡಸೌರ್‌ನ ಈ ಹಳೆಯ ದೇವಾಲಯದಲ್ಲಿಯೇ ನಡೆದಿದ್ದು. ಆದರೆ ಇತ್ತೀಚಿನ ದಿನಗಳಲ್ಲಿ ದಸರಾ ಆಚರಣೆಗಳಲ್ಲಿ ರಾವಣನ ಆರಾಧನೆಯು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

2. ವಿದಿಶಾದ ರಾವಣಗ್ರಾಮದಲ್ಲಿದೆ ರಾವಣ ದೇವಾಲಯ: ರಾವಣಗ್ರಾಮವು ರಾವಣನ ಹೆಸರಿನಲ್ಲಿರುವ ಗ್ರಾಮವಾಗಿದ್ದು (Ravangram Ravana Temple, Vidisha, Madhya Pradesh), ಇದು ಲಂಕಾ ರಾಜನಿಗೆ ಸಮರ್ಪಿತವಾದ ಅತ್ಯಂತ ಪ್ರಸಿದ್ಧ ದೇವಾಲಯ ತಾಣವಾಗಿದೆ. ರಾವಣನ ಹೆಂಡತಿ ಮಂಡೋದರಿ ವಿದಿಶಾದಿಂದ ಬಂದವಳು. ಈ ಸ್ಥಳವು ಗಮನಾರ್ಹ ಸಂಖ್ಯೆಯಲ್ಲಿ ರಾವಣ ಭಕ್ತರನ್ನು ಹೊಂದಿದೆ. ಅವರು ತಮ್ಮ ಗೌರವವನ್ನು ಸಲ್ಲಿಸಲು ಈ ದೇವಾಲಯಕ್ಕೆ ಬರುತ್ತಾರೆ. ಈ ದೇವಾಲಯವು ಬೃಹದಾದ 10 ಅಡಿ ಎತ್ತರದ ರಾವಣನ ಪ್ರತಿಮೆಯನ್ನು ಹೊಂದಿದೆ. ಒಂದು ಕಾಲದಲ್ಲಿ ಈ ದೇವಾಲಯದಲ್ಲಿ, ಇತರೆ ಸ್ಥಳಗಳಲ್ಲಿ ನಡೆಯುವಂತೆ, ಮದುವೆಗಳು ಮತ್ತು ಇತರೆ ಮಂಗಳ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿದ್ದವು. ಏಕೆಂದರೆ ರಾವಣ ಮತ್ತು ಮಂಡೋದರಿಯ ವಿವಾಹವು ಮಂಡಸೌರ್‌ನ ಈ ಹಳೆಯ ದೇವಾಲಯದಲ್ಲಿಯೇ ನಡೆದಿದ್ದು. ಆದರೆ ಇತ್ತೀಚಿನ ದಿನಗಳಲ್ಲಿ ದಸರಾ ಆಚರಣೆಗಳಲ್ಲಿ ರಾವಣನ ಆರಾಧನೆಯು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

3 / 9
3. ದಶಾನನ ಮಂದಿರ, ಕಾನ್ಪುರ
ಕಾನ್ಪುರದಲ್ಲಿರುವ ಈ 100 ವರ್ಷಕ್ಕೂ ಹೆಚ್ಚು ಹಳೆಯದಾದ ದಶಾನನ ಮಂದಿರವು (Dashanan Temple, Kanpur) ವರ್ಷಕ್ಕೊಮ್ಮೆ ದಸರಾದಲ್ಲಿ ಮಾತ್ರ ತೆರೆಯುತ್ತದೆ, ಅಲ್ಲಿ ಭಕ್ತರು ರಾವಣನನ್ನು ಗೌರವಿಸುತ್ತಾರೆ. ದಾಖಲೆಗಳ ಪ್ರಕಾರ, ಇದನ್ನು ರಾಜ ಗುರು ಪ್ರಸಾದ ಶುಕ್ಲ್ ( King Guru Prasad Shukl) ಅವರು 1890 ರಲ್ಲಿ ನಿರ್ಮಿಸಿದರು. ಈ ದೇವಾಲಯದಲ್ಲಿ ರಾವಣನಿಗೆ ಗೌರವ ಸಲ್ಲತ್ತದೆ. ರಾವಣ ಅಂದರೆ ದೊಡ್ಡ ವಿದ್ವಾಂಸ ಮತ್ತು ಪರಮಾತ್ಮ ಶಿವನ ದೊಡ್ಡ ಭಕ್ತ ಎಂದು ಪರಿಗಣಿಸಲಾಗಿದೆ.

3. ದಶಾನನ ಮಂದಿರ, ಕಾನ್ಪುರ ಕಾನ್ಪುರದಲ್ಲಿರುವ ಈ 100 ವರ್ಷಕ್ಕೂ ಹೆಚ್ಚು ಹಳೆಯದಾದ ದಶಾನನ ಮಂದಿರವು (Dashanan Temple, Kanpur) ವರ್ಷಕ್ಕೊಮ್ಮೆ ದಸರಾದಲ್ಲಿ ಮಾತ್ರ ತೆರೆಯುತ್ತದೆ, ಅಲ್ಲಿ ಭಕ್ತರು ರಾವಣನನ್ನು ಗೌರವಿಸುತ್ತಾರೆ. ದಾಖಲೆಗಳ ಪ್ರಕಾರ, ಇದನ್ನು ರಾಜ ಗುರು ಪ್ರಸಾದ ಶುಕ್ಲ್ ( King Guru Prasad Shukl) ಅವರು 1890 ರಲ್ಲಿ ನಿರ್ಮಿಸಿದರು. ಈ ದೇವಾಲಯದಲ್ಲಿ ರಾವಣನಿಗೆ ಗೌರವ ಸಲ್ಲತ್ತದೆ. ರಾವಣ ಅಂದರೆ ದೊಡ್ಡ ವಿದ್ವಾಂಸ ಮತ್ತು ಪರಮಾತ್ಮ ಶಿವನ ದೊಡ್ಡ ಭಕ್ತ ಎಂದು ಪರಿಗಣಿಸಲಾಗಿದೆ.

4 / 9
4. ರಾವಣ ಮಂದಿರ, ಬಿಸ್ರಖ್, ಉತ್ತರ ಪ್ರದೇಶ: ಹಿಂದೂ ಪುರಾಣಗಳ ಪ್ರಕಾರ ರಾವಣನ ಜನ್ಮಸ್ಥಳ ಉತ್ತರ ಪ್ರದೇಶದ ಬಿಸ್ರಖ್ ಪ್ರದೇಶವಾಗಿದೆ (Ravana Mandir, Bisrakh, Uttar Pradesh). ಆದ್ದರಿಂದ ಇಲ್ಲಿನ ಜನರು ರಾವಣನನ್ನು ಮಹಾಬ್ರಹ್ಮ ಎಂದು ಪೂಜಿಸುತ್ತಾರೆ. ನವರಾತ್ರಿಯ 10 ನೇ ದಿನದಂದು ಸ್ಥಳೀಯ ಜನರು ರಾವಣನಿಗೆ ಪೂಜೆ ಮತ್ತು ಯಜ್ಞವನ್ನು ಮಾಡುತ್ತಾರೆ.

5 / 9
5. ಕಂಗ್ರಾ, ಹಿಮಾಚಲ ಪ್ರದೇಶ: ಈ ಸ್ಥಳದಲ್ಲಿ ರಾವಣನು ಶಿವನನ್ನು ಒಲಿಸಿಕೊಳ್ಳಲು ಭಕ್ತಿಯಿಂದ ತಪಸ್ಸು ಮಾಡಿದನೆಂದು ಹೇಳುತ್ತಾರೆ. ರಾವಣನ ತಪಸ್ಸಿಗೆ ಪರಮಾತ್ಮ ಶಿವ ಮನಸೋತನು ಮತ್ತು ಶಿವನ ಆಶೀರ್ವಾದವನ್ನು ಪಡೆದನು. ಆದ್ದರಿಂದ ಕಾಂಗ್ರಾ ಸ್ಥಳೀಯರು ರಾಬೆನಾಸರ್‌ನಲ್ಲಿ (Kangra, Himachal Pradesh) ರಾವಣಾಸುರನ ದೃಷ್ಟಿ ಬೊಂಬೆಯನ್ನು ಸುಡುವುದಿಲ್ಲ.

6 / 9
6. ಜೋಧಪುರ, ರಾಜಸ್ಥಾನ: ಜೋಧಪುರದಲ್ಲಿರುವ (Jodhpur, Rajasthan) ಈ ದೇವಾಲಯದಲ್ಲಿ ರಾವಣನನ್ನು ದಸರಾ ವೇಳೆ ಮಾತ್ರವೇ ಅಲ್ಲದೆ ರಾವಣ ದೇವರು ಎಂದು ದಿನಾ ಪೂಜಿಸಲಾಗುತ್ತದೆ. ಪುರಾಣಗಳ ಪ್ರಕಾರ ರಾವಣನು ಮಂಡೋದರಿ ಎಂಬ ಮಾಂಡವರ್ (King Mandawar) ರಾಜನ ಮಗಳನ್ನು ಮದುವೆಯಾದನು. ಆಗ ರಾಜ್ಯದಲ್ಲಿ ಸರಸ್ವತಿ ನದಿ ಹರಿಯುತ್ತಿತ್ತು. ಆ ರಾಜನ ರಾಜ್ಯವು ಸರಸ್ವತಿ ನದಿಯ ದಡದಲ್ಲಿ ನೆಲೆಸಿತ್ತು. ಜೋಧಪುರದ ಅನೇಕ ಸ್ಥಳಗಳಲ್ಲಿ, ರಾಜನ ಉತ್ತರಾಧಿಕಾರಿಗಳು ತಮ್ಮ ಅಳಿಯ ರಾವಣನ ಸಾವಿನ ಬಗ್ಗೆ ಸಂತಾಪವನ್ನು ವ್ಯಕ್ತಪಡಿಸುತ್ತಾರೆ. ನವರಾತ್ರಿ ನಂತರದ ಆ ದಿನದಂದು ಈ ಪ್ರದೇಶದಲ್ಲಿ ರಾವಣನಿಗಾಗಿ ಜ್ಯೋತಿಯನ್ನು ಹಚ್ಚುತ್ತಾರೆ.

7 / 9
7 ಕಾಕಿನಾಡ ರಾವಣ ದೇವಾಲಯ, ಆಂಧ್ರಪ್ರದೇಶ
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ (Kakinada Ravana temple, Andhra Pradesh), ರಾವಣನಿಗೆ ಸಮರ್ಪಿತವಾದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ನಗರವಿದೆ. ಭಗವಾನ್ ಶಿವನಿಗೆ ಸಮರ್ಪಿತವಾದ ದೇವಾಲಯವನ್ನು ನಿರ್ಮಿಸಲು ರಾವಣನು ಈ ಸ್ಥಳವನ್ನು ವೈಯಕ್ತಿಕವಾಗಿ ಆಯ್ಕೆ ಮಾಡಿದನೆಂದು ನಂಬಲಾಗಿದೆ. ಈ ದೇವಾಲಯವು ಶಿವಲಿಂಗದ ಬೃಹತ್ ಮೂರ್ತಿಯನ್ನು ಹೊಂದಿದೆ, ಇದು ಶಿವನ ಬಗ್ಗೆ ರಾವಣನಿಗೆ ಇರುವ ಗಾಢವಾದ ಗೌರವವನ್ನು ಸಂಕೇತಿಸುತ್ತದೆ. ಕಡಲತೀರದ ಸಮೀಪದಲ್ಲಿರುವ ಈ ದೇವಾಲಯವು ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಗಮನಾರ್ಹವಾಗಿ, ಆಂಧ್ರಪ್ರದೇಶದಲ್ಲಿ ರಾವಣನನ್ನು ಪೂಜಿಸುವ ಕಾಕಿನಾಡ ಏಕೈಕ ಸ್ಥಳವಾಗಿದೆ.

7 ಕಾಕಿನಾಡ ರಾವಣ ದೇವಾಲಯ, ಆಂಧ್ರಪ್ರದೇಶ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ (Kakinada Ravana temple, Andhra Pradesh), ರಾವಣನಿಗೆ ಸಮರ್ಪಿತವಾದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ನಗರವಿದೆ. ಭಗವಾನ್ ಶಿವನಿಗೆ ಸಮರ್ಪಿತವಾದ ದೇವಾಲಯವನ್ನು ನಿರ್ಮಿಸಲು ರಾವಣನು ಈ ಸ್ಥಳವನ್ನು ವೈಯಕ್ತಿಕವಾಗಿ ಆಯ್ಕೆ ಮಾಡಿದನೆಂದು ನಂಬಲಾಗಿದೆ. ಈ ದೇವಾಲಯವು ಶಿವಲಿಂಗದ ಬೃಹತ್ ಮೂರ್ತಿಯನ್ನು ಹೊಂದಿದೆ, ಇದು ಶಿವನ ಬಗ್ಗೆ ರಾವಣನಿಗೆ ಇರುವ ಗಾಢವಾದ ಗೌರವವನ್ನು ಸಂಕೇತಿಸುತ್ತದೆ. ಕಡಲತೀರದ ಸಮೀಪದಲ್ಲಿರುವ ಈ ದೇವಾಲಯವು ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಗಮನಾರ್ಹವಾಗಿ, ಆಂಧ್ರಪ್ರದೇಶದಲ್ಲಿ ರಾವಣನನ್ನು ಪೂಜಿಸುವ ಕಾಕಿನಾಡ ಏಕೈಕ ಸ್ಥಳವಾಗಿದೆ.

8 / 9
8. ವಕ್ಕಲೇರಿ- ಸುಗಟೂರು, ಕೋಲಾರ: ಕೋಲಾರ ತಾಲ್ಲೂಕು ಸುಗಟೂರು ಗ್ರಾಮದಲ್ಲಿ ರಾವಣೋತ್ಸವ ಮಾಡಲಾಗುತ್ತದೆ, ಫಾಲ್ಗುಣ ಹುಣ್ಣಿಮೆಯಂದು ಪ್ರತಿವರ್ಷ ರಾವಣೋತ್ಸವ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ ನಡೆದ ಆರು ದಿನಗಳ ನಂತರ ಈಶ್ವರನನ್ನು ರಾವಣನ ಉತ್ಸವ ಮೂರ್ತಿಯ ಮೇಲೆ ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ, ರಾವಣ ಈಶ್ವರನ ಭಕ್ತ ಅನ್ನೋ ಕಾರಣಕ್ಕೆ ಕೋಲಾರ ಜಿಲ್ಲೆಯ 2 ದೇವಾಲಯಗಳಲ್ಲಿಯೂ (Vakkaleri-Sugatur Ravana Temple) ರಾವಣನಿಗೆ ಅಪರೂಪದ ಗೌರವ ದೊರೆಯುತ್ತದೆ. ಕೋಲಾರ ತಾಲ್ಲೂಕು ವಕ್ಕಲೇರಿ ಗ್ರಾ‌ಮದಲ್ಲೂ ಸಂಕ್ರಾಂತಿ ಹಬ್ಬದ ವೇಳೆ ಬರುವ ಮಾರ್ಕಂಡೇಶ್ವರ ಸ್ವಾಮಿ ರಥೋತ್ಸವದ ನಂತರ ರಾವಣೋತ್ಸವ ಆಚರಣೆ ಮಾಡಲಾಗುತ್ತದೆ. ಇದು 15ನೆ ಶತಮಾನದ ಪುರಾತನ (Vakkaleri Markandeshwara Swamy Hill Temple in Kolar) ದೇಗುಲವಾಗಿದೆ.

9 / 9

Published On - 12:04 pm, Fri, 27 September 24

Follow us
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್

ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು

ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?

ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ

ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ

ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ

Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ

ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!