Updated on: Jun 15, 2022 | 7:00 AM
ನಟಿ ರವೀನಾ ಟಂಡನ್ ಅವರು ಬಾಲಿವುಡ್ನಲ್ಲಿ ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಅವರಿಗೆ ವಯಸ್ಸು ಈಗ 47. ಆದಾಗ್ಯೂ ಅವರು ಯುವತಿಯರನ್ನು ನಾಚಿಸುವಂತೆ ಇದ್ದಾರೆ. ಈಗ ಅವರು ಮಗಳ ಜತೆ ಫೋಟೋ ಹಂಚಿಕೊಂಡಿದ್ದಾರೆ.
ರವೀನಾ ಹಾಗೂ ಅವರ ಮಗಳು ರಾಶಾ ಟಡಾನಿ ಕಾಡೊಂದರಲ್ಲಿ ಸುತ್ತಾಟ ನಡೆಸಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೋದಲ್ಲಿ ರವೀನಾ ಯಂಗ್ ಆಗಿ ಕಾಣಿಸುತ್ತಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ನೀವಿಬ್ಬರೂ ಸಹೋದರಿಯರಂತೆ ಕಾಣುತ್ತಿದ್ದೀರಿ ಎಂದಿದ್ದಾರೆ. ಈ ಫೋಟೋಗೆ ಲಕ್ಷಾಂತರ ಮಂದಿ ಲೈಕ್ಸ್ ಒತ್ತಿದ್ದಾರೆ.
ರವೀನಾ ಅವರು ಇತ್ತೀಚೆಗೆ ‘ಕೆಜಿಎಫ್ 2’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಅವರು ಪ್ರಧಾನಮಂತ್ರಿ ಪಾತ್ರ ಮಾಡಿದ್ದರು.
ರವೀನಾ ಹಾಗೂ ಅವರ ಮಗಳು ರಾಶಾ ಟಡಾನಿ