- Kannada News Photo gallery Rayara Aradhane 2024: offering Srirangam Temple's Shesha Vastra to Raghavendra swamiji photos
Rayara Aradhane 2024: ತಮಿಳುನಾಡಿನ ಶ್ರೀರಂಗಂನ ದೇವಸ್ಥಾನದ ಶೇಷವಸ್ತ್ರ ರಾಯರಿಗೆ ಅರ್ಪಣೆ, ಫೋಟೋಸ್ ನೋಡಿ
ಕಲಿಯುಗದ ಕಾಮದೇನು ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಪ್ರಭುಗಳ 353ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. ರಾಯರ ದರ್ಶನ ಮತ್ತು ಆರಾಧನೆ ವೀಕ್ಷಣೆಗೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಶ್ರೀಮಠದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮಗಳ ಮಾಹಿತಿ ಫೋಟೋ ಸಹಿತ ಇಲ್ಲಿದೆ.
Updated on: Aug 21, 2024 | 9:52 AM

ಕಲಿಯುಗದ ಕಾಮದೇನು ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಪ್ರಭುಗಳ 353ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. ರಾಯರ ದರ್ಶನ ಮತ್ತು ಆರಾಧನೆ ವೀಕ್ಷಣೆಗೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಶ್ರೀಮಠದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮಗಳ ಮಾಹಿತಿ ಫೋಟೋ ಸಹಿತ ಇಲ್ಲಿದೆ.

ಶ್ರೀ ರಾಘವೇಂದ್ರ ಸ್ವಾಮಿಗಳವರ ಆರಾಧನೆಯ ಸುಸಂದರ್ಭದಲ್ಲಿ ಮಂಗಳವಾರ ತಮಿಳುನಾಡಿನ ಶ್ರೀರಂಗ ಕ್ಷೇತ್ರದ ಅರ್ಚಕರು ಶ್ರೀರಂಗಂ ದೇವಸ್ಥಾನದಿಂದ ಶೇಷವಸ್ತ್ರವನ್ನು ತಂದರು. ಅರ್ಚಕರನ್ನು ಮಹಾದ್ವಾರದಲ್ಲಿ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದರು ಸ್ವಾಗತಿಸಿ, ಭವ್ಯ ಮೆರವಣಿಗೆ ಮೂಲಕ ಮಠಕ್ಕೆ ಕರೆತಂದರು.

ನಂತರ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಶ್ರೀಗಳು ಶೇಷವಸ್ತ್ರ ಅರ್ಪಿಸಿದರು. ನಂತರ ಶ್ರೀರಂಗಂ ದೇವಸ್ಥಾನದ ಅರ್ಚಕರು ಪೂಜ್ಯ ಸ್ವಾಮೀಜಿ ಅವರಿಗೆ ಪ್ರಸಾದ ಹಾಗೂ ಶೇಷವಸ್ತ್ರ ಅರ್ಪಿಸಿದರು.

ನಂತರ ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನಕ್ಕೆ ಶ್ರೀ ಬ್ರಹ್ಮ ಕರಾರ್ಚಿತ ಮೂಲ ರಾಮದೇವರ ಪೂಜೆ ಹಾಗೂ ಮಹಾ ಮಂಗಳಾರತಿಯನ್ನು ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದರು ನೆರವೇರಿಸಿದರು. ಅಲಂಕಾರ, ಸಂತರ್ಪಣೆ, ಪಂಡಿತರಿಂದ ಪ್ರವಚನ, ಭಜನೆ ನಡೆಯಿತು.

ಚಿನ್ನದ ಲೇಪನವಿರು ಕಲಶದ ಹೊಂದಿರುವ ನವೀಕೃತ ಶ್ರೀ ರಾಘವೇಂದ್ರ ವೃತ್ತವನ್ನು ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ನಂತರ ಶ್ರೀ ಮಠದ ಮಹಾದ್ವಾರ ಮುಂದೆ ಇರುವ ಶ್ರೀರಾಮನ ಪ್ರತಿಮೆಯನ್ನು ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದರು ಅನಾವಣರಗೊಳಿಸಿದರು.

ಶ್ರೀರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ಬೆಂಗಳೂರಿನ ಬಿಜಿಎಸ್ ಮತ್ತು ಎಣ್ಣೆಬಿಐಟಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಪ್ರಕಾಶನಾಥ ಸ್ವಾಮೀಜಿ, ಬೆಂಗಳೂರಿನ ವಿದ್ವಾನ್ ರಘುಪತಿ ಉಪಾಧ್ಯಾಯ, ವಾರಾಣಸಿಯ ಪ್ರೊ.ವರಜಾ ಭೂಷಣ ಓಝ ಅವರಿಗೆ ಪ್ರದಾನ ಮಾಡಿ, ನಗದು, ನೆನಪಿನ ಕಾಣಿ, ಪ್ರಶಸ್ತಿ-ಸನ್ಮಾನ ಪತ್ರದೊಂದಿಗೆ ಫಲಮಂತ್ರಾಕ್ಷತೆ ನೀಡಿ ಗೌರವಿಸಲಾಯಿತು.

ಸ್ವಚ್ಛ ಸುಂದರ, ಸಂಪೂರ್ಣ ನಿನಾದದೊಂದಿಗೆ ಮುನ್ನಡೆಯುತ್ತಿದ್ದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಿಂದ ಅನ್ನ, ವಿದ್ಯೆ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಶ್ರೀಮಠದಿಂದ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ ವಿಶ್ವವಿದ್ಯಾಲಯ ಆರಂಭಿಸಲಾಗುವುದು ಎಂದು ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.

ಶ್ರೀಗುರುಸಾರ್ವಭೌಮರ ಸಂಕಲ್ಪಕ್ಕೆ ತಕ್ಕಂತೆ ಶ್ರೀಮಠದಿಂದಕೆಲಸ-ಕಾರ್ಯಗಳನ್ನು ಮಾಡಲಾ ಗುತ್ತಿದ್ದು ಜಾತಿ, ಧರ್ಮ, ಬಡವ ಬಲ್ಲಿದ ಎನ್ನುವ ಬೇದವಿಲ್ಲದೆ ಎಲ್ಲರಿಗೂ ಅನ್ನ, ವಿದ್ಯೆ ಮತ್ತು ಆರೋಗ್ಯದಾನ ಒದಗಿಸಬೇಕು ಎನ್ನುವ ಧೈಯ ಹೊಂದಲಾಗಿದೆ. ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ ವಿಶ್ವವಿದ್ಯಾಲಯ ಆರಂಭಿಸಿ ಶಾಲಾ-ಕಾಲೇಜುಗಳು, ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳು, ವೇದ ಮತ್ತು ಶಾಸ್ತ್ರಗಳ ವಿವಿ ಸ್ಥಾಪಿಸಿ ಸುಕ್ಷೇತ್ರವನ್ನು ಶಿಕ್ಷಣದತವರನ್ನಾಗಿಸಲಾಗುವುದು ಎಂದರು.




